Saturday, May 9, 2026
ಸುದ್ದಿ

ವನಿತಾ ಸಮಾಜದ ನೂತನ ಕಟ್ಟಡ ನಾಳೆ ಉದ್ಘಾಟನೆ – ಕಹಳೆ ನ್ಯೂಸ್

ಸುಳ್ಯದ ಪಂಜ ಸಮೀಪದ ಐವತ್ತೊಕ್ಲು ಎಂಬಲ್ಲಿ ವನಿತಾ ಸಮಾಜ ಸಂಘ ತನ್ನ ನೂತನ ಕಟ್ಟಡವನ್ನು ಸ್ಥಾಪಿಸಿ ಉದ್ಘಾಟನೆಯ ಹಾದಿಯಲ್ಲಿದೆ. ನೂತನ ಕಟ್ಟಡದ ಉದ್ಘಾಟನಾ ಕಾರ್ಯ ನಾಳೆ ಪಂಜದಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ನೂತನ ಕಟ್ಟಡದ ಉದ್ಘಾಟನೆಯನ್ನು ನಿರಂಜನಿ ಆರ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸುಳ್ಯ ಶಾಸಕ ಎಸ್ ಅಂಗಾರ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಲ ಕಲ್ತಡ್ಕ, ಬೆಳ್ಳಾರೆ ಜಿಲ್ಲಾ ಪಂಚಾಯತ್ ಸದಸ್ಯ ಎಸ್‍ಎಸ್ ಮನ್ಮಥ, ಪಂಜ ತಾ. ಪಂ. ಸದಸ್ಯ ಅಬ್ದುಲ್ ಗಫೂರ್, ಪಂಜ ಗ್ರಾಂ. ಪಂ. ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್, ಮಂಗಳೂರು ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಇದರ ಅಧ್ಯಕ್ಷೆ ಹರಿಣಿ ಸದಾಶಿವ, ಶ್ರೀ. ಕ್ಷೇ. ಧ. ಗ್ರಾ. ಯೋಜನೆಯ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಶ್ರೀ ಶಾರದಂಬ ಭಜನಾ ಮಂದಿರ ಪಂಜ ಇದರ ಗೌರವಾಧ್ಯಕ್ಷ ಬಿ. ಎಂ ಆನಂದ ಗೌಡ ಕಂಬಳ, ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಇಂದಿರಾ ರಾಜಶೇಖರ ರೈ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮ ಬಗ್ಗೆ ವನಿತಾ ಸಮಾಜದ ಅಧ್ಯಕ್ಷೆ ಚಂದ್ರಾ ಹೊನ್ನಪ್ಪ ಚಿದ್ಗಲ್, ಕಟ್ಟಡ ಸಮಿತಿಯ ಅಧ್ಯಕ್ಷಯೆ ಪುಷ್ಪಾ ಡಿ ಕಾನತ್ತೂರು, ಕಾರ್ಯದರ್ಶಿ ಹೇಮಲತಾ ಜನಾರ್ಧನರಾವ್ ನೆಕ್ಕಿಲ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.