
ದಿನಾಂಕ: 12.7.19 ರಂದು ರಾಮಕುಂಜೇಶ್ವರ ಪದವಿ ಕಾಲೇಜಿನಲ್ಲಿ ಅಂತಿಮ ಬಿಕಾಂ ವಿದ್ಯಾರ್ಥಿಗಳಿಂದ ಹೊಸ ಸರಕಾರದ ಬಜೆಟ್ ವಿಶ್ಲೇಷಣಾ ಕಾರ್ಯಕ್ರಮ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಕೀರ್ತ್ ಹೆಬ್ಬಾರ್ ಮಾತನಾಡಿ ” ಪ್ರತಿ ವಿದ್ಯಾರ್ಥಿಗಳಿಗೆ ದೈನಂದಿನ ವಿದ್ಯಮಾನಗಳ ಬಗ್ಗೆ ಮಾಹಿತಿ ಇರಬೇಕು.
ಈ ಸ್ಪರ್ಧಾತ್ಮಕ ಯುಗದಲ್ಲಿ ನಾವು ಹೊಸ ಹೊಸ ವಿಷಯಗಳನ್ನು ಕಲಿಯುವಲ್ಲಿ ಆಸಕ್ತಿವಹಿಸಬೇಕು. ಒಂದು ವಿಷಯದ ಬಗ್ಗೆ ವಿದ್ಯಾರ್ಥಿಗಳು ಅಗತ್ಯವಾಗಿ ವಿಶ್ಲೇಷಣಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಸರಕಾರದ ಮುಂಗಡಪತ್ರವನ್ನು ವಿಶ್ಲೇಷಿಸುವ ಮೂಲಕ ಅದರ ಹೂರಣವನ್ನು ಅರಿತುಕೊಳ್ಳಬೇಕು.” ಎಂದು ಹೇಳುತ್ತಾ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ನಂತರ ವಿದ್ಯಾರ್ಥಿಗಳು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಬಜೆಟ್‍ನ ವಿಶ್ಲೇಷಣೆಯನ್ನು ಮಾಡಿದರು. ಹೊಸ ಬಜೆಟ್‍ನಿಂದ ಸಾಮಾನ್ಯ ಜನರಿಗೆ, ಸರಕಾರಕ್ಕೆ, ಉದ್ಯಮಿಗಳಿಗೆ ಮತ್ತು ಇತರರಿಗೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ವಿದ್ಯಾರ್ಥಿಗಳು ವಿಶ್ಲೇಷಣೆ ಮಾಡಿದರು. ವಿದ್ಯಾರ್ಥಿಗಳಾದ ಅಖಿಲಾ, ಅನಘ್ರ್ಯ, ಆದಿತ್ಯ ಭಟ್, ಶೈಲೇಶ್, ಅನಿಲ್ ಕುಮಾರ್, ಯಶ್ಮಿತ್, ಪಾರ್ವತಿ, ಅನುಶ್ರೀ, ಧನ್ಯಶ್ರೀ, ಶ್ರೀಪ್ರಿಯ, ಈಶ್ವರಿ ತಮ್ಮ ತಮ್ಮ ತಂಡಗಳ ಮೂಲಕ ಕೇಂದ್ರ ಸರಕಾರದ ಬಜೆಟ್ ವಿಶ್ಲೇಷಣೆಯನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕಿ ಶ್ರೀಮತಿ ರಮ್ಯಾ, ಉಪನ್ಯಾಸಕರಾದ ಶ್ರೀ ಗುರುಕಿರಣ್, ಮತ್ತು ಇತರರರು ಉಪಸ್ಥಿತರಿದ್ದರು.









