Recent Posts

Saturday, May 9, 2026
ಸುದ್ದಿ

ಮಳೆಗಾಲದಲ್ಲಿ ವಾಹನ ಸವಾರರೇ ಎಚ್ಚರ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಮಳೆಗಾಲವೆಂದರೆ ವಾಹನ ಸವಾರರಿಗೆ ಭಯ ಪಡುವಂತಹ ದಿನಗಳು. ಅದರಲ್ಲೂ ದ್ವಿಚಕ್ರ ವಾಹನ ಸವಾರರಂತು ಎಷ್ಟು ಎಚ್ಚರ ವಹಿಸಿದರು ಸಾಲದು. ಮಳೆಗಾಲದಲ್ಲಿ ರಸ್ತೆ ಮೇಲೆ ಚೆಲ್ಲುವ ತೈಲಾಂಶಗಳಿಂದ ಈ ಅವಧಿಯಲ್ಲಿ ದ್ವಿಚಕ್ರ ಸಹಿತ ಇತರ ವಾಹನ ಸವಾರರ ಪಾಲಿಗೆ ಸವಾಲಿನ ದಿನಗಳು.

ಎಲ್ಲ ರಸ್ತೆಗಳಲ್ಲಿ ತೈಲಾಂಶಗಳು ಚೆಲ್ಲಿ ವಾಹನ ಸಂಚಾರದ ವೇಳೆ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ವಾಹನಗಳು ಸಂಚರಿಸುವ ವೇಳೆ ಘನ ವಾಹನಗಳಿಂದ ಸೋರಿಕೆಯಾದ ತೈಲಾಂಶಗಳು ಡಾಮರು ರಸ್ತೆ ಮೇಲೆ ಚೆಲ್ಲಿ ಅಪಾಯಕ್ಕೆ ಆಹ್ವಾನ ನೀಡುವಂತಿವೆ. ಮಳೆಗಾಲ ಆರಂಭದ ದಿನಗಳಲ್ಲಿ ಒದ್ದೆ ನೆಲದಲ್ಲಿ ತೈಲಾಂಶಗಳು ಸೇರಿ ವಾಹನಗಳು ಬ್ರೇಕ್ ಹಾಕಿದಾಗ ಒಮ್ಮೆಗೆ ಸ್ಕಿಡ್ಡಾಗಿ ಉರುಳುವುದು, ಜಾರುವುದು ಇತ್ಯಾದಿ ಘಟನೆಗಳು ನಡೆಯುತ್ತವೆ. ಮಳೆಗಾಲದ ಆರಂಭಿಕ ಹಂತದಲ್ಲಿ ದ್ವಿಚಕ್ರ ವಾಹನ ಸವಾರರು ಎಚ್ಚರ ವಹಿಸಬೇಕಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರಸ್ತೆಯಲ್ಲಿ ಹಾಕಿರುವ ಪೈಂಟ್, ಪ್ಯಾಚ್ ಗೆರೆಗಳು ಕೂಡ ಮಳೆಗಾಲದಲ್ಲಿ ಜಾರುತ್ತವೆ. ಅದರ ಮೇಲೆ ಸಂಚಾರಿಸುವಾಗಲು ಎಚ್ಚರವಿರಲಿ, ವಾಹನಗಳ ನಡುವೆ ಸಾಕಷ್ಟು ಅಂತರವಿರಿಸಿಕೊಳ್ಳುವುದು ಒಳ್ಳೆಯದು. ಎದುರಿನ ವಾಹನಗಳ ಹಾಗೂ ಬ್ರೇಕ್‍ಲೈಟ್‍ಗಳ ಬಗ್ಗೆ ನಿಗಾವಿರಲಿ. ಎಲ್ಲ ಸಂದರ್ಭವೂ ನಿಯಂತ್ರಣ ಅಗತ್ಯವಿದೆ. ವಾಹನಗಳ ನಡುವೆ ನುಗ್ಗಿಸುವ, ಗುಂಡಿ ತಪ್ಪಿಸುವ ಕಾರ್ಯಕ್ಕೆ ಮುಂದಾಗಿ ಆಪತ್ತು ತಂದುಕೊಳ್ಳದಿರುವುದು ಒಳ್ಳೆಯದು.

ಸುಳ್ಯ-ಜಾಲೂರು-ಸುಬ್ರಹ್ಮಣ್ಯ ರಸ್ತೆಯುದ್ದಕ್ಕೂ ಹಲವು ಕಡೆಗಳಲ್ಲಿ ತೈಲಾಂಶಗಳು ರಸ್ತೆ ಮೇಲೆ ಚೆಲ್ಲಿಕೊಂಡಿದೆ. ಅನೇಕ ಸವಾರರು ಈಗಾಗಲೇ ಬಿದ್ದು ಗಾಯಗೊಂಡಿದ್ದಾರೆ. ತೇವ ತುಂಬಿದ ರಸ್ತೆಯಲ್ಲಿ ವಾಹನಗಳು ಬ್ರೇಕ್ ಹಾಕುವಾಗ ಹಿಡಿತ ಸಿಗದೆ ಅವಘಡಗಳು ಸಂಭವಿಸುತ್ತಿರುವುದು ಸವಾರರ ಪ್ರಾಣಕ್ಕೂ ಕುತ್ತು ತರುತ್ತಿದೆ. ಈ ಭಾಗದಲ್ಲಿ ಹಲವು ಅಪಘಾತಗಳು ನಡೆದಿದೆ.

ಬೈಕ್ ಸವಾರರು ಮಳೆಗಾಲದಲ್ಲಿ ವೇಗ ನಿಯಂತ್ರಣ, ಮೊಬೈಲ್ ಬಳಕೆ, ತಿರುವಿನ ಜಾಗದಲ್ಲಿ ಓವರ್ ಟೇಕ್ ಬಗ್ಗೆ ಗಮನವಿರಿಸಬೇಕು. ಹೆಲ್ಮೆಟ್ ಬಳಕೆ ಕಡ್ಡಾಯ. ಇವೆಲ್ಲವೂ ಸುರಕ್ಷತೆ ದೃಷ್ಟಿಯಿಂದ ಬಹುಮುಖ್ಯವಾಗಿದೆ.