Saturday, May 2, 2026
ಸುದ್ದಿ

ಆರೋಗ್ಯಪೂರ್ಣ ಬದುಕಿಗೆ ಯಕ್ಷಗಾನ ಪೂರಕ: ನಾಟ್ಯಗುರು ಎಡಮಂಗಲ ಲಕ್ಷ್ಮಣ ಆಚಾರ್ಯ – ಕಹಳೆ ನ್ಯೂಸ್

“ಯಕ್ಷಗಾನವು ಮಾನವನ ಬುದ್ಧಿ ಭಾವಗಳನ್ನು ಅರಳಿಸುವ ಕಲೆ. ಸೃಜನಶೀಲತೆಗೆ ವಿಪುಲ ಅವಕಾಶವಿಲ್ಲಿದೆ. ನಿಯಮಿತ ಅಭ್ಯಾಸದಿಂದ ಪುರಾಣದ ಕತೆಗಳ ಅರಿವು, ಶುದ್ಧ ಮಾತುಗಾರಿಕೆ, ಆಂಗಿಕ ಸೌಷ್ಠವ ದೊರೆಯುತ್ತದೆ. ಒಟ್ಟಿನಲ್ಲಿ ಆರೋಗ್ಯಪೂರ್ಣ ಬದುಕಿಗೆ ಯಕ್ಷಗಾನ ಪೂರಕ”. ಎಂದು ಯಕ್ಷಗಾನ ಕಲಾವಿದ ನಾಟ್ಯಗುರು ಎಡಮಂಗಲ ಲಕ್ಷ್ಮಣ ಆಚಾರ್ಯ ಅವರು ಕಾಂಚನ ಪ್ರೌಢಶಾಲೆಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಜಕತ್ವದಲ್ಲಿ ನಡೆದ ನಾಟ್ಯತರಬೇತಿಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಸಂಘದ ಅಧ್ಯಕ್ಷ ಮುರಳಿಕೃಷ್ಣ ಬಡಿಲ ಅವರು ಮತಾನಾಡಿ “ಸಂಘದ ವತಿಯಿಂದ ಪರಿಸರದ ವಿವಿಧೆಡೆಗಳಲ್ಲಿ ಯಕ್ಷಗಾನ ನಾಟ್ಯ ತರಬೇತಿಗಳನ್ನು ನಡೆಸುವ ಮೂಲಕ ಹೊಸ ತಲೆಮಾರಿನಲ್ಲಿ ಸದಾಭಿರುಚಿಯ ಕಲಾವಿದರನ್ನು ಸಿದ್ಧಗೊಳಿಸುವ ಕಾರ್ಯ ಕಳೆದ ಹದಿನೈದು ವರ್ಷಗಳಿಂದ ನಡೆಯುತ್ತಿದೆ. ಪೋಷಕರ ಪ್ರೋತ್ಸಾಹವೂ ಗಣನೀಯವಾಗಿ ಹೆಚ್ಚಿದೆ” ಎಂದು ಹೇಳಿದರು. ಸಂಘದ ಕಾರ್ಯದರ್ಶಿ ಹರಿಕಿರಣ್ ಕೊಯಿಲ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ, ಕೋಶಾಧಿಕಾರಿ ಭಾಸ್ಕರ ಬಟ್ಟೋಡಿ ಕೃತಜ್ಞತೆ ಸಲ್ಲಿಸಿದರು. ಗೌರವಾಧ್ಯಕ್ಷ ಗಣರಾಜ ಕುಂಬ್ಳೆ, ಕಲಾಪೋಷಕ, ಮೃದಂಗ ವಿದ್ವಾನ್ ಕಾಂಚನ ವಸಂತಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು