Tuesday, April 28, 2026
ಸುದ್ದಿ

ನನಗೆ ಸೋಲು ಹೊಸದಲ್ಲ. ಸೋಲನ್ನು ಸವಾಲಾಗಿ ಸ್ವೀಕರಿಸುತ್ತೇನೆ- ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು-ಕಹಳೆ ನ್ಯೂಸ್

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸೋಲು ಎದುರಾಯಿತೆಂದು ಮನೆಯಲ್ಲಿ ಸುಮ್ಮನೆ ಕೂತುಕೊಳ್ಳುವ ಜಾಯಮಾನ ನನ್ನದಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹೇಳಿದ್ದಾರೆ.

ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಯಗಳಿಸಿದ ಅಭ್ಯರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಆರೋಗ್ಯ ಸರಿಯಿಲ್ಲ. ಆದರೂ ಬಂದಿದ್ದೇನೆ. ಪಕ್ಷದ ಆರೋಗ್ಯ ಸರಿ ಮಾಡುವುದು ನನ್ನ ಕೆಲಸ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪಕ್ಷ ಸಂಘಟನೆಗೆ ವಯಸ್ಸು ಮುಖ್ಯವಲ್ಲ. ಪಕ್ಷ ಕಟ್ಟೋ ಶಕ್ತಿ ನನಗೆ ಇನ್ನೂ ಇದೆ. ಜೆಡಿಎಸ್‍ಗೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 579 ಸ್ಥಾನ ಬಂದಿದೆ. ಅಷ್ಟು ಸ್ಥಾನ ಗೆದ್ದು ನೀವೆಲ್ಲಾ ನಮ್ಮ ಪಕ್ಷದ ಗೌರವ ಕಾಪಾಡಿದ್ದೀರಿ. ನಿಮ್ಮ ಜತೆ ಸೇರಿ ಮತ್ತೆ ಪಕ್ಷ ಕಟ್ಟುತ್ತೇನೆ ಎಂದರು.

ಲೋಕಸಭೆ ಚುನಾವಣೆಯಲ್ಲಿ 300 ಕ್ಕೂ ಹೆಚ್ಚು ಸ್ಥಾನ ಗೆದ್ದದ್ದು ನರೇಂದ್ರ ಮೋದಿ ಮತ್ತು ಅಮಿತ್ ಶಾ ಚಾಣಾಕ್ಷತನ ಅಂತ ನಾನು ಹೇಳಲ್ಲ. ಜನ ಬಿಜೆಪಿಯವರಿಗೆ ಮತ ಕೊಟ್ಟಿದ್ದಾರೆ ಅಂತಷ್ಟೇ ಹೇಳಬಲ್ಲೆ. ನಾನು ತುಮಕೂರಿನಲ್ಲಿ ಆದ ಸೋಲನ್ನು ಒಪ್ಪಿಕೊಂಡಿದ್ದೇನೆ, ನನಗೆ ಸೋಲು ಹೊಸದಲ್ಲ. ಸೋಲನ್ನು ಸವಾಲಾಗಿ ಸ್ವೀಕರಿಸುತ್ತೇನೆ ಎಂದು ಹೇಳಿದರು .

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನ ಗೆದ್ದು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ತಲಾ ಒಂದು ಸ್ಥಾನ ಬಂದಿದೆ. ಆದರೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎರಡನೇ ಸ್ಥಾನ ಗಳಿಸಿದೆ. ಇದನ್ನು ಕಾರ್ಯಕರ್ತರು ಹಾಗೂ ಮುಖಂಡರು ತಿಳಿದುಕೊಳ್ಳಬೇಕು. ನಮ್ಮ ಪಕ್ಷ ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.