Monday, May 4, 2026
ಸುದ್ದಿ

ಮರುಳುಗಾರಿಗೆ ಕಡಿವಾಣ ಹಾಕಲು ಮುಂದಾದ ಸಚಿವ ಯುಟಿ ಖಾದರ್ : ಕಹಳೆ ನ್ಯೂಸ್ ವರದಿಗೆ ಬೆಂಬಲಿಸಿದ ಸಚಿವ – ಕಹಳೆ ನ್ಯೂಸ್

ಮಂಗಳೂರು : ಕಹಳೆ ನ್ಯೂಸ್ ವರದಿಗಾರರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಸಚಿವ ಯುಟಿ ಖಾದರ್ ಪ್ರತಿಕ್ರಿಯಿಸಿದ್ದು, ಆರೋಪಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಮಾಹಿತಿ ಬಂದಾಕ್ಷಣ ಎಸ್ ಪಿ ಜೊತೆ ಮಾತನಾಡಿದ್ದೇನೆ. ಆರೋಪಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ. ಯಾರೂ ಮುಂದೆ ಹಲ್ಲೆ ಮಾಡಬಾರದು. ಪೊಲೀಸರು ತೆಗೆದುಕೊಳ್ಳುವ ಕ್ರಮ ಪಾಠವಾಗಬೇಕು. ಅರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುಂದು ಎಂದಿದ್ದಾರೆ.

ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಕೋರಿಯಾರ್ ಎಂಬಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಮರುಳು ಮಾಫಿಯಾವನ್ನು ಬೇದಿಸಲು ಹೋದ ಕಡಬದ ವರದಿಗಾರನ ಮೇಲೆ ದಂದೆ ಕೋರರು ಹಲ್ಲೆ ನಡೆಸಿದ್ದರು. ಹಲ್ಲೆಯಲ್ಲಿ ವಾಹಿನಿಯ ಕ್ಯಾಮರಾ, ವಾಹನಗಳಿಗೆ ಹಾನಿ ಉಂಟಾಗಿದ್ದು ರಾಜ್ಯದಲ್ಲಿ ಪತ್ರಕರ್ತರಿಗೆ ಎಲ್ಲಿದೆ ಎಂಬ ಕೂಕು ಕೇಳಿ ಬಂದಿತು, ಇದೀಗ ಮಂಗಳೂರಿನಲ್ಲಿ ಸಚಿವ ಯುಟಿ ಖಾದರ್ ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು