Monday, May 4, 2026
ಸುದ್ದಿ

ಹಾಲಾಡಿಯ ಇಂಜಿನಿಯರ್ ಬೆಂಗಳೂರಿನಲ್ಲಿ ಅನುಮಾನಾಸ್ಪದ ಸಾವು – ಕಹಳೆ ನ್ಯೂಸ್

ಬೆಂಗಳೂರಿನಲ್ಲಿರುವ ಜರ್ಮನ್ ಕಂಪೆನಿಯಲ್ಲಿ ಇಂಜಿನಿಯರ್ ಆಗಿದ್ದ ಹಾಲಾಡಿ ಗ್ರಾಮದ ಗ್ವಾರಾಜಿ ನಿವಾಸಿ ಗುರುರಾಜ್ ಕುಲಾಲ್ (27) ಅವರು ಜೂ. 2ರಂದು ಬೆಂಗಳೂರಿನ ಈಜುಕೊಳದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.
ಗ್ವಾರಾಜಿ ನಿವಾಸಿ ನಾರಾಯಣ ಕುಲಾಲ್ ಮತ್ತು ಸಿದ್ದು ದಂಪತಿಯ ಇಬ್ಬರು ಪುತ್ರರಲ್ಲಿ ಹಿರಿಯವರಾಗಿದ್ದ ಗುರುರಾಜ್ ಅವರು ಕಳೆದ ಆರು ವರ್ಷಗಳಿಂದ ಜರ್ಮನ್ ಕಂಪೆನಿಯಲ್ಲಿ ದುಡಿಯುತ್ತಿದ್ದರು. ಇವರು ಕೊಳದಲ್ಲಿ ಈಜುತ್ತಿದ್ದಾಗ ಮೃತಪಟ್ಟಿದ್ದಾರೆ ಎಂಬ ಮಾಹಿತಿ ವ್ಯಕ್ತವಾಗಿದೆ. ಬಡ ದಂಪತಿಯ ಕಿರಿಯ ಪುತ್ರ ಮೆಸ್ಕಾಂ ಲೈನ್ ಮ್ಯಾನ್ ಆಗಿ ದುಡಿಯುತ್ತಿದ್ದಾರೆ. ಮೃತದೇಹ ಜೂ. 4ರಂದು ಹುಟ್ಟೂರಿಗೆ ತರಲಾಗುವುದು ಎಂದು ತಿಳಿದು ಬಂದಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು