Wednesday, April 29, 2026
ಸುದ್ದಿ

ಅಕಾಲಿಕ ಮಳೆ, ಹವಾಮಾನ ಬದಲಾವಣೆಯಿಂದಾಗಿ ಬೆಂಗಳೂರಲ್ಲಿ ಮತ್ತೆ ಡೆಂಗ್ಯೂ ಮಹಾಮಾರಿ ಸದ್ದು

ಬೆಂಗಳೂರು : ಅಕಾಲಿಕ ಮಳೆ, ಹವಾಮಾನ ಬದಲಾವಣೆಯಿಂದಾಗಿ ಬೆಂಗಳೂರಲ್ಲಿ ಮತ್ತೆ ಡೆಂಗ್ಯೂ ಮಹಾಮಾರಿ ಸದ್ದು ಮಾಡುತ್ತಿದೆ
ಕಳೆದ 9 ದಿನಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 29 ಡೆಂಗ್ಯೂ ಪ್ರಕರಣ ಪತ್ತೆಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಆಗಾಗ ಒಂದೊಂದು ಮಳೆ ಬಂದು ನಿಂತಿರುವ ನೀರಿನಲ್ಲಿ ಹೆಚ್ಚು ಸೊಳ್ಳೆ ಉತ್ಪತ್ತಿಯಾಗುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ರಾಜ್ಯದಲ್ಲಿ ಜನವರಿಯಿಂದ ಇಲ್ಲಿಯವರೆಗೆ 796 ಡೆಂಗ್ಯೂ ಪ್ರಕರಣ ದಾಖಲಾಗಿದೆ. ಬೆಂಗಳೂರಲ್ಲಿ 311, ಶಿವಮೊಗ್ಗದಲ್ಲಿ 99 ಪ್ರಕರಣ ದಾಖಲಾಗಿತ್ತು, 360 ಚಿಕೂನ್ ಗುನ್ಯಾ ಪ್ರಕರಣವು ಕೂಡ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸಾಮಾನ್ಯವಾಗಿ ಮಳೆಗಾಲದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಬಿಬಿಎಂಪಿ ಕೈ ಜೋಡಿಸಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುತ್ತಿತ್ತು. ಆದರೆ ಮುಂಗಾರು ಪೂರ್ವ ಮಳೆ ಬರುತ್ತಿರುವ ಕಾರಣ ಸಾರ್ವಜನಿಕರೇ ಸ್ವಲ್ಪ ಜಾಗ್ರತೆಯಿಂದ ಇರಬೇಕಿದೆ. ಮನೆಯ ಮುಂದೆಲ್ಲಾ ನೀರು ನಿಲ್ಲದಂತೆ ಎಚ್ಚರವಹಿಸಬೇಕಿದೆ.

ಸೋಂಕು ತಡೆಗಟ್ಟುವ ವಿಧಾನ
-ಪೂರ್ತಿ ತೋಳಿರುವ ಉಡುಪು ಧರಿಸುವುದು.
-ಸೊಳ್ಳೆ ಪರದೆ, ಕಿಟಕಿಗಳಿಗೆ ಪರದೆ, ಸೊಳ್ಳೆ ಬತ್ತಿ ಇವುಗಳನ್ನು ಬಳಸುವುದು.
-ಹಗಲು ಹೊತ್ತು ಮಾತ್ರ ಸೊಳ್ಳೆ ಕಚ್ಚುವುದರಿಂದ ಅದರಲ್ಲೂ ಸೂರ್ಯೋದಯ, ಸೂರ್ಯಾಸ್ತಮಾನದ ಸಮಯದಲ್ಲಿ, ನಾವುಗಳು ಈ ಸಮಯದಲ್ಲಿ ಹೆಚ್ಚು ಎಚ್ಚರ ವಹಿಸಬೇಕು.
-ನೀರು ನಿಲ್ಲದಂತೆ ಎಚ್ಚರಿಕೆ
-ಅಕಾಲಿಕ ಮಳೆ, ಮನೆ ಮುಂದೆ ನೀರು ನಿಲ್ಲದಂತೆ ಎಚ್ಚರ ವಹಿಸಿ.
ಡೆಂಗ್ಯೂ ಕುರಿತಾದ ಅಂಶಗಳು
-ಹೆಣ್ಣು ಸೊಳ್ಳೆ ಮಾತ್ರ ತನ್ನ ಮೊಟ್ಟೆಗಳನ್ನು ಇಡಲು ಬೇಕಾಗುವ ಪ್ರೊಟೀನ್ಗಾಗಿ ಮಾತ್ರ ನಮ್ಮನ್ನು ಕಚ್ಚುತ್ತವೆ.
– ಭಯಾನಕ ಸತ್ಯ ಎಂದರೆ ಒಮ್ಮೆ ಸೋಂಕಿಗೊಳಗಾದ ಸೊಳ್ಳೆ, ಸೋಂಕಿತ ಸೊಳ್ಳೆಯಾಗಿಯೇ ಉಳಿಯುತ್ತದಲ್ಲದೆ, ತಾನು ಇಡುವ ಮೊಟ್ಟೆಗಳಿಗೂ ಇದರ ಸೋಂಕನ್ನು ತಲುಪಿಸಿ ತನ್ಮೂಲಕ , ಆ ಮೊಟ್ಟೆ ಮರಿ ಸೊಳ್ಳೆಯಾಗಿ ಹುಟ್ಟುವಾಗಲೇ ಸೋಂಕಿತ ಸೊಳ್ಳೆಯಾಗಿ ಹುಟ್ಟಿ ಮತ್ತೆ ರೋಗ ಪಸರಿಸುತ್ತದೆ.
-ಈ ಸೊಳ್ಳೆಯ ಜೀವಿತಾವಧಿ 2 ವಾರಗಳು ಮಾತ್ರ.
-ಇವು ಸಾಮಾನ್ಯವಾಗಿ ಕತ್ತಲ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸ ಮಾಡುತ್ತವೆ ಅಂದ್ರೆ ನಮ್ಮ ಮನೆಯ ಕ್ಲಾಸೆಟ್ಸ್, ಕರ್ಟನ್, ಮಂಚದ ಕೆಳಗೆ, ವಾರ್ಡ್ ರೋಬ್ಸ್ ಹೀಗೆ ಕತ್ತಲ ಜಾಗಗಳಲ್ಲಿರುತ್ತವೆ.

ಡೆಂಗ್ಯೂ ಹೇಗೆ ಹರಡುತ್ತದೆ..?
ಡೆಂಗ್ಯೂ ಎಂಬ ಖಾಯಿಲೆಯು ವೈರಸ್ ನಿಂದ ಹರಡುವ ಒಂದು ಸೋಂಕು ರೋಗವಾಗಿದೆ, ರಚನೆಯಲ್ಲಿ ಅಲ್ಪ ಪ್ರಮಾಣದ ವ್ಯತ್ಯಾಸವಿರುವ DENV1, DENV2,DENV2, DENV4 ಎಂಬ 4 ವಿಧದ ವೈರಸ ಗಳಿಂದ ಹರಡುತ್ತದೆ.