Wednesday, April 29, 2026
ರಾಜಕೀಯಸುದ್ದಿ

ಅಂದು ನಿಖಿಲ್ ಎಲ್ಲಿದ್ದೀಯಪ್ಪಾ.. ಇಂದು ಅನಿತಕ್ಕಾ ಎಲ್ಲಿದ್ದೀರಾ.? – ಕಹಳೆ ನ್ಯೂಸ್

ನಿಖಿಲ್ ಎಲ್ಲಿದ್ದೀಯಪ್ಪಾ ಎಂಬ ಮಾತು ಸಾಕಷ್ಟು ಟ್ರೋಲ್ ಆಗುತ್ತಿದ್ದಂತೆ ಇದೀಗ ಅನಿತಕ್ಕಾ ಎಲ್ಲಿದ್ದೀರಿ ಎಂಬ ಮಾತು ಟ್ರೋಲ್‍ಗೆ ರಾಮನಗರದ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾರಂಭವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿರುವ ಅನಿತಾ ಕುಮಾರಸ್ವಾಮಿಯವರ ಬಗ್ಗೆ, ನಿಖಿಲ್ ಎಲ್ಲಿದ್ದೀಯಪ್ಪಾ ಎಂಬುದನ್ನೇ ಪರ್ಯಾಯವಾಗಿ, ಅನಿತಕ್ಕಾ ಎಲ್ಲಿದ್ದೀರಾ.? ಎಂದು ಜನತೆ ಕೇಳುವ ಮೂಲಕ, ಕ್ಷೇತ್ರದ ಜನರು ತಮ್ಮ ಸಮಸ್ಯೆಯನ್ನು ಆಲಿಸದ ಶಾಸಕಿ ವಿರುದ್ಧ ಹೀಗೊಂದು ಹೊಸ ಅಭಿಯಾನವನ್ನು ಹುಟ್ಟುಹಾಕಿದ್ದಾರೆ.

ಅಂದಹಾಗೇ, ರಾಮನಗರದಲ್ಲಿ ಇಂತಹ ಶಾಸಕಿ ಅನಿತಾ ಕುಮಾರಸ್ವಾಮಿಯವರ ಬಗ್ಗೆ ಅನಿತಕ್ಕಾ ಎಲ್ಲಿದ್ದೀರಾ ಎಂಬುದನ್ನು ಬಳಸಿಕೊಂಡು ಅನೇಕರು ಟ್ರೋಲ್ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತ್ತಿದ್ದಾರೆ. ವಿನೋದ್ ಹಾಗೂ ರುದ್ರದೇವ್ ಎಂಬುವರು ನಗರದಲ್ಲಿ 3 ದಿನಕ್ಕೊಮ್ಮೆಯಾದ್ರೂ ಮೋರಿ ನೀರನ್ನು ಹರಿಸುತ್ತಿದ್ದರು. ಈಗ ಅದನ್ನೂ ಕೇಳುವಂತಿಲ್ಲ. 10-15 ದಿನಕ್ಕೆ ಒಮ್ಮೆ ಕುಡಿಯೋ ನೀರು ಬಿಡ್ತಾ ಇದ್ದಾರೆ. ಶಾಸಕಿ ಅನಿತಾ ಕುಮಾರಸ್ವಾಮಿಯವರೇ ಎಲ್ಲಿದ್ದಾರೋ ಗೊತ್ತಿಲ್ಲ. ಹೀಗಾಗಿ ಎಲ್ಲಿದ್ದೀರಿ ಅನಿತಕ್ಕಾ ಬನ್ನಿ ಎಂದು ಟ್ರೋಲ್ ಮೂಲಕ ಶಾಸಕಿಗೆ ಪ್ರಶ್ನೆ ಮಾಡಲು ಆರಂಭಿಸಿದ್ದಾರೆ.