
ಬೆಲೆಯಲ್ಲಿ ಏರಿಕೆಯಾಗಿ ಜನತೆಯನ್ನ ಕಂಗೆಡಿಸುವಂತೆ ಮಾಡಿದ್ದ ಪೆಟ್ರೋಲ್ ಬೆಲೆ ಇದೀಗ ಇಳಿಕೆ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‍ಗೆ ಇಂದಿನ ಬೆಲೆ 4,317 ರೂ ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 26 ಪೈಸೆ ಇಳಿಕೆಯಾಗಿ 73.47 ರೂ ಮತ್ತು ಡೀಸೆಲ್ ದರ 12 ಪೈಸೆ ಇಳಿಕೆಯಾಗಿ 67.98 ರೂ ಇದೆ.

ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 25 ಪೈಸೆ ಇಳಿಕೆಯಾಗಿ 71.18 ರೂ ಮತ್ತು ಡೀಸೆಲ್ ದರ 12 ಪೈಸೆ ಇಳಿಕೆಯಾಗಿ 65.86 ರೂ ಇದೆ. ಮುಂಬಯಿಯಲ್ಲಿ ಇಂದಿನ ಪೆಟ್ರೋಲ್ ದರ 76.77 ರೂ (24 ಪೈಸೆ ಇಳಿಕೆ) ಮತ್ತು ಡೀಸೆಲ್ ಬೆಲೆ 68.98 ರೂ (12 ಪೈಸೆ ಇಳಿಕೆ) ಆಗಿದೆ.









