Tuesday, April 28, 2026
ರಾಜಕೀಯಸುದ್ದಿ

ಸುಮಲತಾ ಗೆಲುವಿನ ಭವಿಷ್ಯ ನುಡಿದ ದೇವರ ಹೂ – ಕಹಳೆ ನ್ಯೂಸ್

ಮಂಡ್ಯ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಭರದಿಂದ ಪ್ರಚಾರ ಕಾರ್ಯ ಕೈಗೊಂಡಿದ್ದ ನಿಖಿಲ್ ಮತ್ತು ಸುಮಲತಾ ಇದೀಗ ಜಯ ಯಾರ ಪಾಲಾಗುತ್ತೆ ಎಂದು ಕಾದು ಕುಳಿತಿದ್ದಾರೆ. ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಗೆಲುವು ಸಾಧಿಸಲಿದ್ದಾರೆ ಎಂದು ದೇವರ ಹೂ ಭವಿಷ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸುಮಲತಾ ಗೆಲ್ಲುವುದಾದರೆ ಬಲಕ್ಕೆ ಹೂವು ಕೊಡಮ್ಮ ಎಂದು ದೇವಾಲಯದ ಅರ್ಚಕರು ಮನವಿ ಮಾಡಿದ್ದು, ದೇವರ ಮೂರ್ತಿಯ ಬಲ ಭಾಗದಿಂದ ಹೂ ಬಿದ್ದು, ಗೆಲುವಿನ ಸೂಚನೆ ನೀಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಲದಿಂದ ದೇವರು ಹೂ ಪ್ರಸಾದ ನೀಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಸುಮಲತಾ ಗೆಲುವಿನ ಬಗ್ಗೆ ಭಾರೀ ಚರ್ಚೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು