Monday, April 27, 2026
ಸುದ್ದಿ

ಮೋದಿ ಪೋಟೋ ಮುಂದೆ ಬಿಜೆಪಿ ಮುಖಂಡನ ಆಕ್ರೋಶ- ಕಹಳೆ ನ್ಯೂಸ್

ಪಕ್ಷದ ಬಾವುಟ ಕಟ್ಟುವಾಗ ಜಾತಿ, ಹಣ ಬಲ ನೋಡದ ಮುಖಂಡರು ಈಗ ಜಾತಿ, ಹಣ ಬಲ ಇಲ್ಲ ಎಂದು ಟಿಕೆಟ್ ಕೊಡಲು ನಿರಾಕರಿಸುತ್ತಿರುವುದಾಗಿ ಬಿಜೆಪಿ ಮುಖಂಡನೊಬ್ಬ ಮೋದಿ ಫೋಟೋ ಎದುರು ಅಳು ತೋಡಿಕೊಂಡಿದ್ದಾರೆ. ಶಿವಮೊಗ್ಗಾ ಜಿಲ್ಲೆಯ ಸಾಗರ ಜಿಲ್ಲೆಯ ಚುನಾವಣೆಯಲ್ಲಿ 18 ನೇ ವಾರ್ಡಿನ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗಣೇಶ್ ಗಟ್ಟಿ ಅಳಲು ತೋಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾಗರ ನಗರ ಬಿಜೆಪಿ ಯುವ ಮೋರ್ಚಾ ಘಟಕದ ಅಧ್ಯಕ್ಷರಾಗಿರುವ ಗಣೇಶ್ ಗಟ್ಟಿ 18 ನೇ ವಾರ್ಡ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ಟಿಕೆಟ್ ನೀಡಿಲ್ಲ. ಇದರಿಂದ ಅಸಮಾಧಾನಗೊಂಡಿರುವ ಅವರು ಮೋದಿ ಫೋಟೋ ಮುಂದೆ ಅಸಮಾಧಾನ ಹೊರಹಾಕಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು