
ಪುತ್ತೂರು: ವೃದ್ಧ ದಂಪತಿಯನ್ನು ಬಲಾತ್ಕಾರವಾಗಿ ಹೊರ ಹಾಕಿದ ಇಬ್ಬರು ಪುತ್ರ ಮತ್ತು ಪುತ್ರಿಯಿಂದ ಅವರಿದ್ದ ಮನೆಯನ್ನು ಹಿಟಾಚಿ ಮೂಲಕ ಕಡೆವಿದ ಘಟನೆ ಕೆದಿಲ ಗ್ರಾಮದ ಬೀಟಿಗೆಯಲ್ಲಿ ನಡೆದ ಘಟನೆ ವರದಿಯಾಗಿದ್ದು ವೃದ್ಧ ದಂಪತಿ “ನನ್ನನ್ನು ನನ್ನ 9 ಮಕ್ಕಳ ಪೈಕಿ ಮೂವರು ಮಕ್ಕಳು ಮನೆಯಿಂದ ಹೊರ ಹಾಕಿದ್ದಾರೆಂದು” ಆರೋಪಿಸಿದ್ದಾರೆ. ಕೆದಿಲ ಗ್ರಾಮದ ಬೀಟಿಗೆ ಆರ್.ಕೆ. ಮಂಝಿಲ್ ನಿವಾಸಿ ಮಹಮ್ಮದ್ (75) ಮತ್ತು ಅವರ ಪತ್ನಿ ಖತಿಜಮ್ಮ(72)ರವರು ಮನೆಯಿಂದ ಹೊರ ನೂಕಲ್ಪಟ್ಟವರು. ಅವರಿಬ್ಬರಿಗೂ ಗಾಯವಾಗಿದ್ದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಪುತ್ತೂರು ನಗರ ಠಾಣೆಯಲ್ಲಿ ದಾಖಲಾಗಿದೆ.










