Monday, April 27, 2026
ರಾಜಕೀಯಸುದ್ದಿ

ಪರಿಕ್ಕರ್ ನಿಧನದ ಬೆನ್ನಲ್ಲೇ ಗೋವಾದಲ್ಲಿ ಕಾಂಗ್ರೆಸ್ ಸರ್ಕಾರ – ಕಹಳೆ ನ್ಯೂಸ್

ಪಣಜಿ : ಗೋವಾ ಸಿಎಂ ಮನೋಹರ್ ಪರಿಕ್ಕರ್ ನಿಧನದ ಬೆನ್ನಲ್ಲೇ ಕಾಂಗ್ರೆಸ್ ಗೋವಾದಲ್ಲಿ ಸರ್ಕಾರ ರಚನೆಗೆ ಮುಂದಾಗಿದ್ದು, ಈ ಸಂಬಂಧ ಗವರ್ನರ್ ಗೆ ಪತ್ರ ಬರೆದಿದೆ. ವಿರೋಧ ಪಕ್ಷದ ನಾಯಕ ಚಂದ್ರಕಾಂತ್ ಕವ್ಲೇಕರ್ ಈ ಸಂಬಂಧ ಗವರ್ನರ್‍ಗೆ ಪತ್ರ ಬರೆದಿದ್ದು, ಸರ್ಕಾರ ರಚಿಸಲು ಅಗತ್ಯವಿರುವ ಶಾಸಕರನ್ನು ಬಿಜೆಪಿ ಹೊಂದಿಲ್ಲ. ಹಾಗಾಗಿ ತಮಗೆ ಅವಕಾಶ ನೀಡಬೇಕು ಎಂದು ಕೋರಿದ್ದಾರೆ ಎಂದಿದ್ದಾರೆ.

ಮನೋಹರ್ ಪರಿಕ್ಕರ್ ನಿಧನ ಹಾಗೂ ಇಬ್ಬರು ಶಾಸಕರು ರಾಜೀನಾಮೆ ನಂತರ ಗೋವಾ ವಿಧಾನಸಭೆಯ ಸಂಖ್ಯಾಬಲ 40 ರಿಂದ 36 ಕ್ಕೆ ಕುಸಿದಿದ್ದು, ಬಹುಮತ ಕಳೆದುಕೊಂಡ ಬಿಜೆಪಿ ನೇತೃತ್ವದ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು