Recent Posts

Sunday, April 26, 2026
ಸುದ್ದಿ

ಕಡಬದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಷನ್ ಸುಳ್ಯ ಕ್ಷೇತ್ರ ಸಮಿತಿ ಸಭೆ – ಕಹಳೆ ನ್ಯೂಸ್

ಕಡಬ: ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಷನ್ ಸುಳ್ಯ ಕ್ಷೇತ್ರ ಸಮಿತಿಯ ಸಭೆಯು ಇಂದು ಕಡಬದ ದುರ್ಗಾಂಬಿಕ ಅಮ್ಮನವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಸಭೆಯು ಟಿ. ದಿವಾಕರ ಜಾಲ್ಸುರ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಈ ಸಭೆಯಲ್ಲಿ ಮಂಗಳೂರಿನ ಗೋರಿಗುಡ್ಡೆಯಲ್ಲಿ ನಿರ್ಮಾಣವಾದ ಟೈಲರ್ ಭವನದ ಕಟ್ಟಡ ಉದ್ಘಾಟನೆಯ ಪ್ರಯುಕ್ತ ಮಾಡಲಾದ ಅದೃಷ್ಟ ಕೂಪನ್ ಅನ್ನು ಬಿಡುಗಡೆ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸಭೆಯಲ್ಲಿ ದ.ಕ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಎಸ್.ರುಕ್ಮ ಗೌಡ, ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಶರ್ಮಿಳಾ.ವಿ.ರೈ, ಕ್ಷೇತ್ರ ಸಮಿತಿಯ ಕೋಶಾಧಿಕಾರಿ ಆಶಾ.ವಿ ರೈ, ಹಾಗೂ ಕಡಬ ವಲಯದ ಸದಸ್ಯರುಗಳು ಉಪಸ್ಥಿತರಿದ್ದರು.