Recent Posts

Sunday, April 26, 2026
ಸುದ್ದಿ

ಸುಬ್ರಹ್ಮಣ್ಯ ದೇವಸ್ಥಾನ ಹಾಗು ನರಸಿಂಹ ಮಠದ ಮದ್ಯೆ ಉತ್ತಮ ಬಾಂದವ್ಯ ಇದೆ: ವಿ.ಹಿಂ.ಪ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಪವಿತ್ರ ಕ್ಷೇತ್ರ ಶ್ರೀ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನ ಹಾಗು ಶ್ರೀ ಸಂಪುಟ ನರಸಿಂಹ ಮಠ ಮದ್ಯೆ ಅತ್ಯಂತ ಉತ್ತಮ ಬಾಂದವ್ಯ ಇದೆ. ಸಮಗ್ರ ಹಿಂದೂ ಸಮಾಜದ ಸಾಮರಸ್ಯ ಸಂವರ್ಧನೆಗೊಳ್ಳಬೇಕಾಗಿ ವಿಶ್ವ ಹಿಂದೂ ಪರಿಷತ್ ವಿನಂತಿ ಮಾಡಿಕೊಂಡಿದೆ.

ಪ್ರಾಂತ್ಯ ಕಾರ್ಯಾಧ್ಯಕ್ಷರು ಯಂ.ಬಿ ಪುರಾಣಿಕ್, ವಿಭಾಗ ಕಾರ್ಯದರ್ಶಿಗಳು ಶರಣ್ ಪಂಪುವೆಲ್ ಯಾವುದೇ ಭಿನ್ನಾಭಿಪ್ರಾಯ ಇದ್ದರೆ ಸೌಹಾರ್ದ ಮಾತುಕಥೆಯಿಂದ ಅಥವಾ ನ್ಯಾಯಾಲಯದ ಮೂಲಕ ಬಗೆಹರಿಸಬಹುದು ಎಂದು ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಒಂದೊಮ್ಮೆ ಅಂತಹ ಶಾಂತಿಯುತ ಪರಿಹಾರಕ್ಕೆ ವ್ಯತಿರಿಕ್ತವಾಗಿ ಹಿಂದೂ ಸಮಾಜವನ್ನು ಒಡೆಯುವ ಮಾನಸಿಕತೆ ಹಾಗು ಬಹಿರಂಗ ಕಾರ್ಯಕ್ರಮಗಳು ಘಟಿಸಿದಲ್ಲಿ ಅದನ್ನು ವಿಶ್ವ ಹಿಂದೂ ಪರಿಷತ್ ಸಂಪೂರ್ಣವಾಗಿ ಎದುರಿಸುವ ಅನಿವಾರ್ಯತೆ ಇದೆ ಎಂದು ಮನವರಿಕೆ ಮಾಡಿದ್ದಾರೆ.