Monday, April 27, 2026
ಸುದ್ದಿ

ಬ್ರಿಟನ್ ಸರ್ಕಾರದ ಅನುಮತಿ ವಿರುದ್ಧ ಮೇಲ್ಮನವಿ ಸಲ್ಲಿಸಲಿರುವ ಮದ್ಯ ದೊರೆ – ಕಹಳೆ ನ್ಯೂಸ್

ಲಂಡನ್: ಭಾರತಕ್ಕೆ ಹಸ್ತಾಂತರ ಮಾಡಲು ಬ್ರಿಟನ್ ಸರ್ಕಾರ ಅನುಮತಿ ನೀಡಿರುವ ವಿರುದ್ಧ ಮದ್ಯ ದೊರೆ ವಿಜಯ್ ಮಲ್ಯ ಮೇಲ್ಮನವಿ ಸಲ್ಲಿಸಲಿರುವರು.

ಬ್ರಿಟನ್ ನ ಗೃಹ ಕಾರ್ಯದರ್ಶಿ ಸಾಜಿದ್ ಸಾವಿದ್ ಅವರು ಮಲ್ಯರನ್ನು ಭಾರತಕ್ಕೆ ಹಸ್ತಾಂತರ ಮಾಡಬಹುದು ಎಂದು ಭಾನುವಾರ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಮಲ್ಯ ನಿರ್ಧಾರ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮಲ್ಯ ಮೇಲ್ಮನವಿ ಸಲ್ಲಿಸಿದರೆ ಅದನ್ನು ಅಂಗೀಕಾರ ಮಾಡಲು ಯಾವುದೇ ಆಧಾರಗಳು ಇದೆಯಾ ಎನ್ನುವ ಬಗ್ಗೆ ವಿಚಾರಣೆ ನಡೆಯಲಿದೆ.

ಇದಕ್ಕೆ ಕೆಲವು ತಿಂಗಳುಗಳು ಬೇಕಾಗಬಹುದು. ಬ್ರಿಟನ್ ಹೈಕೋರ್ಟ್ ನ ಭಾಗವಾಗಿರುವ ಆಡಳಿತ ಕೋರ್ಟ್ ನಲ್ಲಿ ವಿಚಾರಣೆ ನಡೆಯುವುದು.