Recent Posts

Thursday, June 18, 2026
ಸುದ್ದಿ

ಪುತ್ತೂರಿನಲ್ಲಿ ಫೆ.12 ರಂದು 108 ಸೂರ್ಯನಮಸ್ಕಾರ ವಿಶೇಷ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ಈ ಬಾರಿಯ ರಥ ಸಪ್ತಮಿಯಂದು ಸ್ವಸ್ಥ ಪುತ್ತೂರು ಆಶಯದೊಂದಿಗೆ 108 ಸೂರ್ಯನಮಸ್ಕಾರ ಕಾರ್ಯಕ್ರಮವನ್ನು ಆರ್ಟ್ ಆಫ್ ಲಿವಿಂಗ್ ಪುತ್ತೂರು ವಿಭಾಗವು ಹಮ್ಮಿಕೊಂಡಿದೆ. ಇದಕ್ಕಾಗಿ ತರಬೇತಿ ಶಿಬಿರವು ದರ್ಬೆ ಶ್ರೀ ರಾಮ್ ಸೌಧದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು

‘ಸ್ವಸ್ಥ ಪುತ್ತೂರು’ ಆಶಯದೊಂದಿಗೆ ಆರ್ಟ್ ಆಫ್ ಲಿವಿಂಗ್ ಪುತ್ತೂರು ಹಮ್ಮಿಕೊಂಡಿರುವ ಸೂರ್ಯನಮಸ್ಕಾರ ಕಾರ್ಯಕ್ರಮವು ಫೆ.12 ರ ರಥಸಪ್ತಮಿಯಂದು ತೆಂಕಿಲ ವಿವೇಕಾನಂದ ಶಾಲಾ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಸುಮಾರು 1,000 ಮಂದಿ ಏಕಕಾಲಕ್ಕೆ 108 ಸೂರ್ಯನಮಸ್ಕಾರ ಮಾಡುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇದಕ್ಕಾಗಿ ಈಗಾಗಲೇ ಸಿದ್ಧತೆ ನಡೆಯುತ್ತಿದ್ದು ತರಬೇತಿ ಶಿಬಿರ ಆಯೋಜನೆಗೊಂಡಿದೆ. ಆರಂಭದ ಶಿಬಿರದಲ್ಲಿ 30 ಮಂದಿ ತರಬೇತಿ ಪಡೆದಿದ್ದಾರೆ. ಇದೇ ವೇಳೆ ವೃದ್ಧರಿಗೆ, ಬಿಪಿ ಹಾಗೂ ಹೃದಯ ಸಂಬಂಧಿ ಸಮಸ್ಯೆ ಇರುವವರಿಗೆ ಪ್ರತ್ಯೇಕವಾಗಿ ಚಯರ್ ಸೂರ್ಯನಮಸ್ಕಾರ ತಿಳಿಸಿಕೊಡಲಾಗಿದೆ. ಇನ್ನಷ್ಟು ತರಬೇತಿ ಶಿಬಿರ ಹಾಗೂ ಮಾಹಿತಿ ಕಾರ್ಯಕ್ರಮ ನಡೆಯುತ್ತಿದೆ ಎಂದು ಆರ್ಟ್ ಆಫ್ ಲಿವಿಂಗ್ ಇದರ ಪುತ್ತೂರು ಮುಖ್ಯಸ್ಥ ಕುಮಾರ ಸುಬ್ರಹ್ಮಣ್ಯ ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಎಲ್ಲರ ಸಹಕಾರವನ್ನು ಅಪೇಕ್ಷಿಸಲಾಗಿದ್ದು ಸಂಘ-ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು, ತಮ್ಮ ಸದಸ್ಯರು ಸೂರ್ಯನಮಸ್ಕಾರ ಕಲಿತು ಅಭ್ಯಸಿಸುವಂತೆ ಪ್ರೇರೇಪಿಸಬೇಕಾಗಿದೆ. ಈ ಬಗ್ಗೆ ತರಬೇತಿ ಅಗತ್ಯವಿದ್ದರೆ ಸಂಘಟಕರು ಕಾರ್ಯಕರ್ತರು ಆಗಮಿಸಿ ಸೂರ್ಯನಮಸ್ಕಾರ ತರಬೇರಿಯನ್ನೂ ನೀಡಲು ಉತ್ಸುಕರಾಗಿದ್ದಾರೆ ಎಂದು ಕಾರ್ಯಕ್ರಮದ ಸಂಯೋಜಕಿ ಶರಾವತಿ ರವಿನಾರಾಯಣ ತಿಳಿಸಿದ್ದಾರೆ.

ರಥ ಸಪ್ತಮಿಯಂಉ ಏಕೆ ಸೂರ್ಯನಮಸ್ಕಾರ :
ಸೂರ್ಯದೇವರ ಜನುಮದಿನವು ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿಯಂದು ಬರುತ್ತದೆ. ಅಂದರೆ ರಥಸಪ್ತಮಿಯಂದು ಸೂರ್ಯನು ಅವತರಿಸಿದ ಎಂಬ ನಂಬಿಕೆ ಇದೆ. ಮಕರ ಸಂಕ್ರಮಣ ಕಳೆದ ಈ ಹೊತ್ತಿನಲ್ಲಿ ಸೂರ್ಯಬೆಳಕು ಮೈಗೆ ಬಿದ್ದರೆ ಉತ್ತಮ ಆರೋಗ್ಯವು ಸಿದ್ಧಿಸುತ್ತದೆ. ಹಾಗೆಯೇ ಪಾಂಡವರು ವನವಾಸದಲ್ಲಿ ಇರುವಂತಹ ಸಂದರ್ಭದಲ್ಲಿ ಸೂರ್ಯನು ಪ್ರತ್ಯಕ್ಷನಾಗಿ ಅಕ್ಷಯ ಪಾತ್ರೆಯನ್ನು ರಥಸಪ್ತಮಿಯಂದು ದಯಪಾಲಿಸಿದನು ಎಂಬ ನಂಬಿಕೆ ಇದೆ.

೧೦೮ ಸೂರ್ಯನಮಸ್ಕಾರ ಏಕೆ?
ನಮ್ಮ ಶರೀರದಲ್ಲಿ 108 ಚಕ್ರಗಳಿದ್ದು, ಅವು ಎಲ್ಲವೂ ಸಮರ್ಪಕವಾಗಿ ಕಾರ್ಯಾಚರಿಸಬೇಕಾದರೆ ಅದಕ್ಕೊಂದಿಷ್ಟು ಶಕ್ತಿ ಸಂಚಯನವಾಗಲೇ ಬೇಕು. 108 ಸೂರ್ಯನಮಸ್ಕಾರ ಇದಕ್ಕೆ ಸಹಕಾರಿಯಾಗುತ್ತದೆ. ಒಟ್ಟು 12 ಆಸನಗಳಿಂದ ಕೂಡಿದ ಸಂಯೋಜನೆ. ಪ್ರತಿ ಆಸನಕ್ಕೂ ಅದರದ್ದೇ ಆದ ಮಂತ್ರೋಚ್ಛರಣೆ ಇದೆ. ಸೂರ್ಯ ನಮಸ್ಕಾರ ಮಾಡುವುದರಿಂದ ಒತ್ತಡದಿಂದ ಮುಕ್ತಿ ದೊರೆಯುತ್ತದೆ. ಮನಸ್ಸು ಮತ್ತು ದೇಹದ ಆರೋಗ್ಯವು ಸುಧಾರಿಸುತ್ತದೆ. ಇಂದಿನ ದಿನಗಳಲ್ಲಿ ಕಾಡುವ ಬಿ ಪಿ, ಶುಗರ್ ಮತ್ತು ಹೃದಯ ವೈಫಲ್ಯಗಳಿಂದ ಬಿಡುಗಡೆ ಲಭಿಸುತ್ತದೆ.

ಮಾಡುವ ವಿಧಾನ ಹೇಗೆ?
ಫೆ.12 ರಂದು ರಥಸಪ್ತಮಿಯಂದು ಮುಂಜಾನೆ 2 ಗಂಟೆ ಹೊತ್ತು ಜಾತಿಮತಧರ್ಮಗಳ ಭೇದ ಮರೆತು ಸೂರ್ಯನಮಸ್ಕಾರವನ್ನು ಮಾಡುವುದು. ನಡುನಡುವೆ ವಿರಾಮವನ್ನು ಅಗತ್ಯವೆನ್ನಿಸಿದರೆ ತೆಗೆದುಕೊಳ್ಳಬಹುದು. ಇದರ ಜೊತೆಗೆ ನಾಡಿಶೋಧನ ಪ್ರಾಣಾಯಾಮ, ಶೀತಲೀ ಪ್ರಾಣಾಯಾಮವನ್ನು ಮಾಡುವುದು ಇದರ ಉದ್ದೇಶ.