
ಬೆಂಗಳೂರು: ಸಿನಿಮಾಗಳಲ್ಲಿ ನಟರು ಸಿಗರೇಟ್ ಹಿಡಿದು ಪೋಸ್ ಕೊಡುವುದನ್ನು ನೋಡಿ ಯುವಜನತೆ ಪ್ರೇರಣೆಗೊಂಡು ದಾರಿ ತಪ್ಪಬಾರದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಆಯೋಜಿಸಲಾಗಿದ್ದ ‘ತಂಬಾಕು ಮುಕ್ತ ಯುವ ಅಭಿಯಾನ 4.0’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಯುವಜನತೆಗೆ ಕಿವಿಮಾತು ಹೇಳಿದ ಯು.ಟಿ. ಖಾದರ್, “ಟಿವಿ ಮತ್ತು ಸಿನಿಮಾಗಳಲ್ಲಿ ನಟರು ಕೇವಲ ಸಿಗರೇಟ್ ಹಿಡಿದುಕೊಂಡು ಪೋಸ್ ಕೊಡುತ್ತಾರೆ. ಅದನ್ನು ನೋಡಿ ಯುವಜನತೆ ಹಾಳಾಗಬೇಡಿ. ನಟರು ತೆರೆಯ ಮೇಲೆ ಪೋಸ್ ಕೊಟ್ಟರು ಅಂತ ನೀವು ಸಿಗರೇಟ್ ಸೇದಲು ಶುರು ಮಾಡಿದರೆ, ಮುಂದೆ ನೀವು ಆಸ್ಪತ್ರೆಯ ಐಸಿಯು (ICU) ಸೇರಬೇಕಾಗುತ್ತದೆ. ಅಂತಹ ದುಶ್ಚಟಗಳ ವಿಚಾರದಲ್ಲಿ ಸಿನಿಮಾ ನಟರನ್ನು ಎಂದಿಗೂ ಮಾದರಿಯಾಗಿ ತೆಗೆದುಕೊಳ್ಳಬೇಡಿ” ಎಂದು ಎಚ್ಚರಿಸಿದರು.











