ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಡಿಸೆಂಬರ್ 25 ಮತ್ತು 26 ರಂದು ನಡೆಯುವ ವಾರ್ಷಿಕ ಜಾತ್ರಾಮಹೋತ್ಸವ ಹಾಗೂ ಪರಿವಾರ ದೈವಗಳ ನರ್ತನ ಸೇವೆಯ ಬಗ್ಗೆ 2ನೇ ಪೂರ್ವಭಾವಿ ಸಭೆ ಮತ್ತು ವಾರ್ಷಿಕ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ – ಕಹಳೆ ನ್ಯೂಸ್

ಶ್ರೀ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ಬೆಳಾಲು ಇಲ್ಲಿ ಡಿಸೆಂಬರ್ 25 ಮತ್ತು 26 ರಂದು ನಡೆಯುವ ವಾರ್ಷಿಕ ಜಾತ್ರಾಮಹೋತ್ಸವ ಹಾಗೂ ಪರಿವಾರ ದೈವಗಳ ನರ್ತನ ಸೇವೆಯ ಬಗ್ಗೆ 2ನೇ ಪೂರ್ವಭಾವಿ ಸಭೆ ಮತ್ತು ವಾರ್ಷಿಕ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ದೇವಸ್ಥಾನದ ಅಕ್ಷೋಭ್ಯ ಸಭಾಭವನದಲ್ಲಿ ನಡೆಯಿತು.
ಸಭಾಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಗೌಡ ವಹಿಸಿದ್ದರು.ವೇದಿಕೆಯಲ್ಲಿಜಾತ್ರಮಹೋತ್ಸವದ ಪ್ರಧಾನ ಸಂಚಾಲಕರಾದ ಶ್ರೀಮತಿ ಸರೋಜಿನಿ ಭೀಮಂಡೆ,ದೇವಸ್ಥಾನದ ಅಸ್ರಣ್ಣರಾದ ಶ್ರೀ ಗಿರೀಶ್ ಬಾರಿತ್ತಾಯ ಪಾರಳ ,ವ್ಯವಸ್ಥಾಪನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ದುರ್ಗಾಪ್ರಸಾದ್ ಕೇರ್ಮುನ್ನಾಯ,ಬೆಳಾಲುಗುತ್ತು ಮನೆಯ ಶ್ರೀಮತಿ ಹೇಮಲತಾ ಜೀವಂಧರ ಕುಮಾರ್ ಜೈನ್,ವ್ಯವಸ್ಥಾಪನಾ ಸಮಿತಿಯ ಉಪಾಧ್ಯಕ್ಷರಾದ ಶ್ರೀಮತಿ ಮಮತಾ ದಿನೇಶ್ ಪೂಜಾರಿ ಉಪ್ಪಾರು, ಮಹಿಳಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಹೇಮಲತಾ ಶ್ರೀನಿವಾಸ್ ಉಪಸ್ಥಿತರಿದ್ದರು.ಸಭೆಯಲ್ಲಿ ವಿವಿಧ ಬೈಲುವಾರು ಸಮಿತಿಯ ಸದಸ್ಯರು,ಮಹಿಳಾ ಸಮಿತಿಯ ಗೌರವಾಧ್ಯಕ್ಷರಾದ ಶ್ರೀಮತಿ ವಿದ್ಯಾ ಶ್ರೀನಿವಾಸ್,ಹಿರಿಯ ಸದಸ್ಯರಾದ ದೇಜಪ್ಪ ಗೌಡ ಅರಣೆಮಾರು,ಸುಂದರ ಎಂ ಕೆ,ಜಾರಪ್ಪ ಗೌಡ ಅರಣೆ ಮಾರು,ಬಾಬು ಆಚಾರ್ಯ ಸೀತಾರಾಮ ಬಿ ಎಸ್,ಶ್ರೀನಿವಾಸಗೌಡ ಗಣಪನಗುತ್ತು, ಶ್ರೀ ಶಿವಕುಮಾರ್ ಬಾರಿತ್ತಾಯ ಪಾರಳ,ಅನಂತೇಶ್ವರ ಭಜನಾ ಮಂಡಳಿಯ ಪದಾಧಿಕಾರಿಗಳು,ಬೈಲುವಾರು ಸಮಿತಿಯ ಸಂಚಾಲಕರು, ಸಹಸಂಚಾಲಕರು ಮತ್ತು ಸದಸ್ಯರು, ಅನಂತೇಶ್ವರ ಫ್ರೆಂಡ್ಸ್ ಇದರ ಪದಾಧಿಕಾರಿಗಳು,ಮಹಿಳಾ ಸಮಿತಿಯ ಸದಸ್ಯರು ಮತ್ತು ಊರಿನ ಭಕ್ತಭಿಮಾನಿಗಳು ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿಯ ಖಾಯಂ ಆಹ್ವಾನಿತ ಸದಸ್ಯ ಶ್ರೀ ಕಿರಣ್ ಸುವರ್ಣ ಇರಂತ್ಯಾರು ಸ್ವಾ ಗತವಿತ್ತು,ದೇವಸ್ಥಾನದ ಕಚೇರಿ ಮೇಲ್ವಿಚಾರಕ ಶ್ರೀ ಶಿವಪ್ರಸಾದ್ ಗೊಲ್ಲ ಕಾರ್ಯಕ್ರಮ ನಿರೂಪಿಸಿ,ಧನ್ಯವಾದವಿತ್ತರು.











