Thursday, November 19, 2026
ಸುದ್ದಿ

ಕಂಡ್ಲೂರು ವರಲಕ್ಷ್ಮಿ ಜ್ಞಾನ ವಿಕಾಸ ಕೇಂದ್ರದಲ್ಲಿ ಟ್ಯೂಷನ್ ಕ್ಲಾಸ್ ಉದ್ಘಾಟನೆ – ಕಹಳೆ ನ್ಯೂಸ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಕುಂದಾಪುರ ತಾಲೂಕಿನ ಬಸ್ರೂರು ವಲಯದ ಕಂಡ್ಲೂರು ಕಾರ್ಯಕ್ಷೇತ್ರದ ವರಲಕ್ಷ್ಮಿ ಜ್ಞಾನ ವಿಕಾಸ ಕೇಂದ್ರದಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಟ್ಯೂಷನ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮವು ರಾಮ್ಸನ್ ಸರಕಾರಿ ಪ್ರೌಢಶಾಲೆ ಕಂಡ್ಲೂರು ಇಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮ್ಸನ್ ಸರಕಾರಿ ಪ್ರೌಢಶಾಲೆ ಕಂಡ್ಲೂರು ಇಲ್ಲಿಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುರೇಶ್ ಮೊಗವೀರ ಅವರು ವಹಿಸಿಕೊಂಡರು.
ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಜರಗುವ ಅನೇಕ ಕಾರ್ಯಕ್ರಮಗಳಲ್ಲಿ ಟ್ಯೂಷನ್ ಕ್ಲಾಸ್ ಒಂದಾಗಿದೆ. ಗ್ರಾಮೀಣ ಭಾಗದಲ್ಲಿರುವ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಇಂದಿನ ಮಕ್ಕಳೇ ಮುಂದಿನ ಜನಾಂಗಕ್ಕೆ ಭದ್ರ ಬುನಾದಿ ಎಂದು ಹೇಳಿದರು.ಮಕ್ಕಳ ಏಕಾಗ್ರತೆ ಹೆಚ್ಚು ಮಾಡುವ ಆಟ ಆಡಿಸಿದರು.ಬಳಿಕ ಶಿಕ್ಷಣದ ಮಟ್ಟವನ್ನು ಹೆಚ್ಚು ಮಾಡಲು ಟ್ಯೂಷನ್ ಕ್ಲಾಸ್ ಅತಿ ಅಗತ್ಯವಿದೆ ಎಂದು ಕುಂದಾಪುರ ತಾಲೂಕಿನ ಯೋಜನಾಧಿಕಾರಿಯವರಾದ ಉಮೇಶ್ ಶೆಟ್ಟಿ ಅವರು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪೂಜ್ಯರು ಗ್ರಾಮೀಣ ಭಾಗದ ಅಭಿವೃದ್ಧಿ ಹರಿಕಾರರಾಗಿ ಎಷ್ಟೋ ಜನರ ಬಾಳಿಗೆ ಬೆಳಕಾಗಿದ್ದಾರೆ .ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಉತ್ತಮವಾದ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ .

ಜಾಹೀರಾತು

ಇಂತಹ ಗ್ರಾಮೀಣ ಭಾಗದ ಸರಕಾರಿ ಪ್ರೌಢಶಾಲೆಗೆ ವಿಶೇಷವಾದ ಅವಕಾಶವನ್ನು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒದಗಿಸಿದೆ. ವಿದ್ಯೆಯನ್ನು ಪಡೆಯಲು ತುಂಬಾ ಶ್ರಮ ಪಡಬೇಕು.ಕಷ್ಟ ಪಟ್ಟರೆ ಮಾತ್ರ ನಮಗೆ ಉತ್ತಮಜೀವನ ಸಾಗಿಸಲು ಸಾಧ್ಯ. ಓದು ಇಲ್ಲದವನ ಬಾಳು ಕಣ್ಣು ಇಲ್ಲದಂತೆ, ವಿದ್ಯೆ ಇಲ್ಲದ ಬಾಳು ಕತ್ತಲೆ ಕವಿದಂತೆ. ಜ್ಞಾನ ಎಂಬುದು ನಮ್ಮನ್ನು ಅತಿ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಕಂಡ್ಲೂರು ಒಕ್ಕೂಟದ ಅಧ್ಯಕ್ಷರಾದ ಗೌರಿ ಆರ್ ಶ್ರೀಯಾನ್ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಮೂಲಕ ನಮ್ಮ ಶಾಲೆಗೆ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ಹೆಚ್ಚುವರಿ ಶಿಕ್ಷಣ ನೀಡುವ ಅವಕಾಶ ಬಂದಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮ ಅತೀ ಅಗತ್ಯ ಅದೂ ನಮ್ಮ ಶಾಲೆಗೆ ದೊರಕಿದ್ದು ನಮ್ಮ ಸುಯೋಗ ಎಂದು ಮುಖ್ಯ ಶಿಕ್ಷಕಿಯಾದ ಸುಜಾತ ಹೊಳ್ಳ ಅವರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ರಾಮ್ಸನ್ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸುಜಾತ ಹೊಳ್ಳ ,ಕುಂದಾಪುರ ತಾಲೂಕಿನ ಯೋಜನಾಧಿಕಾರಿ ಉಮೇಶ್ ಶೆಟ್ಟಿ ,ಕುಂದಾಪುರ ತಾಲೂಕಿನ ಜ್ಞಾನ ವಿಕಾಸ ಸಮನ್ವಯಾಧಿಕಾರಿ ರೇಣುಕಾ ಕೋಡಪದವು, ಕಂಡ್ಲೂರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಪ್ರೇಮ ,ರಾಮ್ಸನ್ ಸರಕಾರಿ ಪ್ರೌಢಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿಯಾದ ಸುಜಾತ ಹೊಳ್ಳ ಅವರು ಸ್ವಾಗತ ಮಾಡಿದರು. ರಾಮ್ಸನ್ ಸರಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕರಾದ ಸಂತೋಷ್ ಕಾರ್ಯಕ್ರಮವನ್ನು ನಿರೂಪಿಸಿದರು.ಜ್ಞಾನವಿಕಾಸ ಸಮನ್ವಯಾಧಿಕಾರಿ, ರೇಣುಕಾ ಕೋಡಪದವು ಧನ್ಯವಾದ ಅರ್ಪಿಸಿದರು.