Friday, November 6, 2026
ಸುದ್ದಿ

ನಾಳೆ ( ನ.07 ) ಐತಿಹಾಸಿಕ ಸಂಪಾಜೆ ಯಕ್ಷೋತ್ಸವ 2026 ; ಕೇಶವಾನಂದ ಭಾರತೀ ಮಹಾಸ್ವಾಮಿಗಳ ಪುಣ್ಯಸ್ಮೃತಿ, ಪ್ರಶಸ್ತಿ ಪ್ರದಾನ ಸಮಾರಂಭ – ಕಹಳೆ ನ್ಯೂಸ್

ಮಾಯಾ ಮೃಗಾವತಿ (ಬಡಗು), ಮಾಯಾ ಮಾನಿನಿ (ಬಡಗು ಮತ್ತೆ ತೆಂಕು), ಮಾಯಾ ವಿಹಾರಿ (ತೆಂಕು) ಅದ್ದೂರಿ ಯಕ್ಷಗಾನ ಪ್ರದರ್ಶನ

ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ಇದರ ವತಿಯಿಂದ ಸಂಪಾಜೆ ಯಕ್ಷೋತ್ಸವ 2026 ಹಾಗೂ ಬ್ರಹ್ಮಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳವರ ಪುಣ್ಯಸ್ಕೃತಿ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನ. 7 ರಂದು ಸಂಪಾಜೆ ಸಂಯುಕ್ತ ಪ.ಪೂ.ಕಾಲೇಜಿನ ಮೈದಾನದಲ್ಲಿ ನಡೆಯಲಿದ್ದು, ಇದರ ಪೂರ್ವತಯಾರಿಯಾಗಿ ಭರದಿಂದ ಕೆಲಸಗಳು ಸಾಗುತ್ತಿವೆ.

ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸುಮಾರು 3000 ಮಂದಿಗೆ ಕುಳಿತುಕೊಳ್ಳು ಬೇಕಾದ ಫಂಡಾಲ್ ವ್ಯವಸ್ಥೆ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಚೌಕಿಯಿಂದ ಸಂಪಾಜೆ ಜೂನಿಯರ್ ಕಾಲೇಜು ಬಳಿವರೆಗೆ ರಸ್ತೆ ಬದಿಯ ಕಾಡು ಕಡಿದು ಸ್ವಚ್ಛತೆ ಮಾಡಲಾಯಿತು. ಕಾಲೇಜು ಬಳಿಯಿಂದ ಮೈದಾನಕ್ಕೆ ಹೋಗುವ ದಾರಿಗೆ ಇಂಟಲಾಕ್ ಅಳಡಿಸಲಾಗಿದೆ. ಯಕ್ಷೋತ್ಸವದಂದು ವಿದ್ಯುದ್ದೀಪಾಲಂಕಾರಗಳಿಂದ ಕಂಗೊಳಿಸಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ನವಂಬರ್ 7 ಶನಿವಾರ ಮಧ್ಯಾಹ್ನ 1.30ಕ್ಕೆ ಯಕ್ಷೋತ್ಸವ ಆರಂಭಗೊಳ್ಳಲಿದೆ. ತೆಂಕು, ಬಡಗು ಯಕ್ಷಗಾನ ಪ್ರಸಂಗವ ಪ್ರದರ್ಶನ ನಡೆಯಲಿದೆ.

1. ಮಾಯಾ ಮೃಗಾವತಿ (ಬಡಗು): ಮಧ್ಯಾಹ್ನ 1.30 ರಿಂದ ಸಂಜೆ 5 ಗಂಟೆವರೆಗೆ
2. ಮಾಯಾ ಮಾನಿನಿ (ಬಡಗು ಮತ್ತೆ ತೆಂಕು): ಸಂಜೆ 7.30 ರಿಂದ ರಾತ್ರಿ 12.30 ವರೆಗೆ.
3. ಮಾಯಾ ವಿಹಾರಿ (ತೆಂಕು) ರಾತ್ರಿ 12.30 ರಿಂದ ಬೆಳಗ್ಗೆ 7.30

ಸಂಜೆ 5.30 ರಿಂದ 7.30ವರೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮಲ್ಲಿ ಶ್ರೀ ಕೇಶವಾನಂದಭಾರತೀ ರಾಷ್ಟ್ರೀಯ ನ್ಯಾಯ ಪ್ರಶಸ್ತಿ, ಶ್ರೀ ಕೇಶವಾನಂದಭಾರತೀ ಶೈಕ್ಷಣಿಕ ಪ್ರಶಸ್ತಿ, ಶ್ರೀ ಕೇಶವಾನಂದಭಾರತೀ ಸಂಗೀತ ಪ್ರಶಸ್ತಿ, ಶ್ರೀ ಕೇಶವಾನಂದಭಾರತೀ ಯಕ್ಷಗಾನಾಧ್ವರ್ಯು ಪ್ರಶಸ್ತಿ, ಯಕ್ಷೋತ್ಸವ ವೈದಿಕ ಪ್ರಶಸ್ತಿ, ಯಕ್ಷೋತ್ಸವ ಕಲಾಪೋಷಕ ಪ್ರಶಸ್ತಿ ಪ್ರದಾನ, ಯಕ್ಷೋತ್ಸವ ಅಭಿನಂದನೆ, ಯಕ್ಷೋತ್ಸವ ಸನ್ಮಾನ ನಡೆಯಲಿದೆ.

ಶ್ರೀ ಕೇಶವಾನಂದಭಾರತೀ ರಾಷ್ಟ್ರೀಯ ನ್ಯಾಯ ಪ್ರಶಸ್ತಿಗೆ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಶ್ರೀ ಕೃಷ್ಣ ಎಸ್ ದೀಕ್ಷಿತ್ ಅವರು ಭಾಜನರಾಗಲಿದ್ದಾರೆ.

ಕೇಶವಾನಂದಭಾರತೀ ಶೈಕ್ಷಣಿಕ ಪ್ರಶಸ್ತಿಗೆ ಮಂಗಳೂರಿನ ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಎ. ಶ್ರೀನಿವಾಸ ರಾವ್ ಅವರು ಭಾಜನರಾಗಲಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ಅವರು ಶ್ರೀ ಕೇಶವಾನಂದಭಾರತೀ ಸಂಗೀತ ಪ್ರಶಸ್ತಿಗೆ ಪಾತ್ರರಾಗಿದ್ದರೆ, ಶ್ರೀ ಕೇಶವಾನಂದಭಾರತೀ ಯಕ್ಷಗಾನಾಧ್ವರ್ಯು ಪ್ರಶಸ್ತಿಗೆ ಉಡುಪಿಯ ಯಕ್ಷಗಾನ ಕಲಾರಂಗ ಅವರು ಭಾಜನವಾಗಲಿದೆ.

ಯಕ್ಷೋತ್ಸವ ವೈದಿಕ ಪ್ರಶಸ್ತಿಗೆ ಕುಂಭಾಶಿಯ ಸಿದ್ದಿವಿನಾಯಕ ದೇವಸ್ಥಾನದ ನಿವೃತ್ತ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಯಕೋತ್ಸವ ಕಲಾಪೋಷಕ ಪ್ರಶಸ್ತಿಗೆ ಹೈಕೋರ್ಟ್ ನ್ಯಾಯವಾದಿಗಳಾದ ನಿಶಿತ್ ಕುಮಾರ್ ಶೆಟ್ಟಿ ಹಾಗೂ ಯಕ್ಷೋತ್ಸವ ಅಭಿನಂದನೆಗೆ ಹೈಕೋರ್ಟ್ ನ್ಯಾಯವಾದಿ ರಾಜಶೇಖರ ಹಿಲಿಯಾರು, ಯಕ್ಷೋತ್ಸವ ಸನ್ಮಾನದ ಗೌರವಕ್ಕೆ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಭಾಜನರಾಗಲಿದ್ದಾರೆ.

ಎಡನೀರು ಮಠದ ಸಚ್ಚಿದಾನಂದಭಾರತೀ ಮಹಾಸ್ವಾಮಿಗಳು, ಸುಬ್ರಹ್ಮಣ್ಯಮಠದ ವಿದ್ಯಾಪ್ರಸನ್ನತೀರ್ಥ ಮಹಾಸ್ವಾಮಿಗಳು ಸಮಾರಂಭಲ್ಲಿ ಆಶೀರ್ವಚನ ನೀಡಿ, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಒಟ್ಟಿನಲ್ಲಿ ಅದ್ದೂರಿ ಯಕ್ಷೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.