
ಹಾಸನ: ಹಾಸನಾಂಬೆ ದೇವಿ ದರ್ಶನಕ್ಕೆ ಎಂಟನೇ ದಿನ ಭಕ್ತ ಮಹಾಸಾಗರವೇ ಹರಿದುಬಂದಿದ್ದು, ರಾತ್ರಿ ಸುರಿದ ಮಳೆಗೆ ಪರದಾಡುವಂತಾಗಿದೆ.
ಬುಧವಾರ (ನ.5) ತಡರಾತ್ರಿ ಹಾಸನ ಜಿಲ್ಲೆಯ ವಿವಿಧೆಡೆ ಮಿಂಚು, ಗುಡುಗು, ಸಿಡಿಲಿನ ಸಹಿತ ಧಾರಾಕಾರ ಮಳೆ ಸುರಿದಿದೆ. ಭಾರಿ ಮಳೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ, ಹಾಸನಾಂಬ ದೇವಿ ದರ್ಶನಕ್ಕೆ ಬಂದಿದ್ದ ಭಕ್ತರು ಪರದಾಡುವಂತಾಯಿತು. ಜನರೇಟರ್ ವ್ಯವಸ್ಥೆಯೂ ಇಲ್ಲದ ಕಾರಣ ಕೆಲಕಾಲ ಕತ್ತಲಿನಲ್ಲಿಯೇ ಭಕ್ತರು ಕಾಲ ಕಳೆಯಬೇಕಾಯಿತು.
ಇಂದು (ನ.6) ಹಾಸನಾಂಬ ದೇವಿ ದರ್ಶನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಶಿವರಾಜ ಎಸ್.ತಂಗಡಗಿ, ನರೇಂದ್ರಸ್ವಾಮಿ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿ ವಿವಿಧ ಕ್ಷೇತ್ರದ ಗಣ್ಯರು ಆಗಮಿಸಲಿದ್ದಾರೆ.











