Saturday, November 7, 2026
ಸುದ್ದಿ

ಜಿ.ಎಲ್. ಆಚಾರ್ಯ ಜುವೆಲರ್ಸ್‌ನಲ್ಲಿ ನ.5ರಿಂದ 11ರವರೆಗೆ ವಿಶೇಷ ದೀಪಾವಳಿ ಆಫರ್ : ಚಿನ್ನ, ವಜ್ರ, ಬೆಳ್ಳಿ ಖರೀದಿಗೆ ಭರ್ಜರಿ ಕೊಡುಗೆ..!- ಕಹಳೆ ನ್ಯೂಸ್

ಪುತ್ತೂರು, ನ.3: ದೀಪಾವಳಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲು ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಪ್ರಸಿದ್ಧ ಚಿನ್ನಾಭರಣ ಮಳಿಗೆ ಜಿ.ಎಲ್. ಆಚಾರ್ಯ ಜುವೆಲರ್ಸ್ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ.

ಜಾಹೀರಾತು

ನವೆಂಬರ್ 5ರಿಂದ 11ರವರೆಗೆ ನಡೆಯುವ ಈ ವಿಶೇಷ ಕೊಡುಗೆ ಅವಧಿಯಲ್ಲಿ ಚಿನ್ನಾಭರಣಗಳ ಮೇಕಿಂಗ್ ಚಾರ್ಜ್ (ವಿಎ ಶುಲ್ಕ) ಮೇಲೆ ಶೇ.30 ರಿಯಾಯಿತಿ ನೀಡಲಾಗುತ್ತದೆ. ವಜ್ರಾಭರಣಗಳ ಖರೀದಿಯಲ್ಲಿ ಪ್ರತಿ ಕ್ಯಾರೆಟ್‌ಗೆ 8,000 ರೂ. ಹಾಗೂ ಬೆಳ್ಳಿಯ ಆಭರಣಗಳ ಖರೀದಿಯಲ್ಲಿ ಪ್ರತಿ ಕೆ.ಜಿ.ಗೆ 8,000 ರೂ. ನೇರ ರಿಯಾಯಿತಿ ಲಭ್ಯವಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ನಗದು ಪಾವತಿಸಿ ಚಿನ್ನಾಭರಣ ಖರೀದಿಸಲು ಬಯಸುವ ಗ್ರಾಹಕರಿಗೆ ಈ ಕೊಡುಗೆ ಉತ್ತಮ ಅವಕಾಶವಾಗಿದೆ. ಯಾವುದೇ ಜುವೆಲರ್ಸ್‌ನಿಂದ ಖರೀದಿಸಿದ ಹಳೆಯ ಶೇ.91.6 ಶುದ್ಧತೆಯ ಚಿನ್ನಾಭರಣಗಳನ್ನು ವಿನಿಮಯ ಮಾಡಿಕೊಳ್ಳುವಾಗ ಎಕ್ಸ್‌ಚೇಂಜ್ ದರದ ಮೇಲೆ ಯಾವುದೇ ಕಡಿತವಿಲ್ಲದೆ (ಶೇ.0 ಕಡಿತ) ಮೌಲ್ಯ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಗ್ರಾಹಕರು ಚಿನ್ನದ ಉಳಿತಾಯ ಯೋಜನೆಗೆ ಸೇರ್ಪಡೆಯಾಗುವ ಅವಕಾಶವೂ ಇದ್ದು, ನಿಗದಿತ ಅವಧಿಯ ಬಳಿಕ ಮುಂದಿನ ವರ್ಷದ ಇದೇ ಹಬ್ಬದ ಸಂದರ್ಭದಲ್ಲಿ ಚಿನ್ನಾಭರಣ ಖರೀದಿಸಬಹುದಾಗಿದೆ. ಹಬ್ಬದ ಖರೀದಿಯೊಂದಿಗೆ ಉಳಿತಾಯಕ್ಕೂ ಅವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ದೀಪಾವಳಿಗಾಗಿ ಸಂಸ್ಥೆಯು ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿಯ ವೈವಿಧ್ಯಮಯ ಚಿನ್ನಾಭರಣಗಳು, ವಜ್ರಾಭರಣಗಳ ಆಕರ್ಷಕ ಸಂಗ್ರಹವನ್ನು ಸಿದ್ಧಪಡಿಸಿದೆ. ಗ್ರಾಹಕರು ತಮ್ಮ ಅಭಿರುಚಿ ಮತ್ತು ಅಗತ್ಯಗಳಿಗೆ ಅನುಗುಣವಾಗಿ ವಿವಿಧ ವಿನ್ಯಾಸಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಈ ಕೊಡುಗೆಗಳು ಚಿನ್ನದ ನಾಣ್ಯಗಳು, ಚಿನ್ನದ ಗಟ್ಟಿಗಳು ಹಾಗೂ ಎಲ್ಲೋ ಟ್ಯಾಗ್ ಹೊಂದಿರುವ ಆಭರಣಗಳಿಗೆ ಅನ್ವಯಿಸುವುದಿಲ್ಲ. ಅಲ್ಲದೆ, ಈ ಕೊಡುಗೆಯನ್ನು ಚಿನ್ನದ ಉಳಿತಾಯ ಯೋಜನೆ ಅಥವಾ ಇತರ ಯಾವುದೇ ಯೋಜನೆಯೊಂದಿಗೆ ಸಂಯೋಜಿಸಲು ಅವಕಾಶವಿಲ್ಲ.

ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಜಿ.ಎಲ್. ಆಚಾರ್ಯ ಜುವೆಲರ್ಸ್ ಪುತ್ತೂರು ಸೇರಿದಂತೆ ಸುಳ್ಯ, ಮೂಡುಬಿದಿರೆ, ಹಾಸನ ಹಾಗೂ ಕುಶಾಲನಗರದಲ್ಲಿ ಮಳಿಗೆಗಳನ್ನು ಹೊಂದಿದೆ. ದೀಪಾವಳಿಯ ಈ ವಿಶೇಷ ಕೊಡುಗೆ ಸಂಸ್ಥೆಯ ಎಲ್ಲಾ ಮಳಿಗೆಗಳಲ್ಲೂ ಲಭ್ಯವಿರಲಿದೆ ಎಂದು ಪ್ರಕಟಣೆ ತಿಳಿಸಿದೆ.