Wednesday, October 21, 2026
ಸುದ್ದಿ

ಇಂದು ಮಂಗಳೂರು ದಸರಾದ ಅದ್ದೂರಿ ಶೋಭಾಯಾತ್ರೆ, ಸಂಜೆ 4 ಗಂಟೆಗೆ ವೈಭವದ ಮೆರವಣಿಗೆ- ಕಹಳೆ ನ್ಯೂಸ್

ಮಂಗಳೂರು: ಮಂಗಳೂರು ದಸರಾ ಮಹೋತ್ಸವದ ಪ್ರಯುಕ್ತ ಅಕ್ಟೋಬರ್ 21 ರಂದು ಬುಧವಾರ ಸಂಜೆ 4 ಗಂಟೆಯಿಂದ ಅಕ್ಟೋಬರ್ 22 ರ ಬೆಳಗ್ಗೆ 6 ಗಂಟೆಯವರೆಗೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ದೇವರ ಮೆರವಣಿಗೆ ಮತ್ತು ಸ್ತಬ್ಧಚಿತ್ರಗಳ (ಟ್ಯಾಬ್ಲೋ) ಸಂಚಾರ ನಡೆಯಲಿದೆ.

ಜಾಹೀರಾತು

ಈ ಹಿನ್ನೆಲೆಯಲ್ಲಿ ನಗರದಲ್ಲಿ ಸಾರ್ವಜನಿಕರ ಸುಗಮ ಸಂಚಾರ ಹಾಗೂ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯು ವಾಹನ ಸಂಚಾರದಲ್ಲಿ ಬದಲಾವಣೆಗಳನ್ನು ಮಾಡಿದೆ. ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದಲೇ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಈ ಮಾರ್ಗಗಳನ್ನುಉಪಯೋಗಿಸದೇ  ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮತ್ತು ರಸ್ತೆ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸದಂತೆ ಕೋರಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೆರವಣಿಗೆ ಸಾಗುವ ಮುಖ್ಯ ಮಾರ್ಗ
ಕುದ್ರೋಳಿ ದೇವಸ್ಥಾನದ ದ್ವಾರದಿಂದ ಹೊರಟು ಮಣ್ಣಗುಡ್ಡೆ ಜಂಕ್ಷನ್, ನಾರಾಯಣಗುರು ವೃತ್ತ (ಲೇಡಿಹಿಲ್), ಲಾಲ್‌ಭಾಗ್, ಬಳ್ಳಾಲ್ ಭಾಗ್, ಪಿ.ವಿ.ಎಸ್. ಜಂಕ್ಷನ್, ನವಭಾರತ ವೃತ್ತ, ಸಿಟಿ ಸೆಂಟರ್, ಹಂಪನಕಟ್ಟೆ, ಕೆಬಿಕಟ್ಟೆ, ಕಾರ್ ಸ್ಟ್ರೀಟ್ ಹಾಗೂ ನ್ಯೂಚಿತ್ರಾ ಜಂಕ್ಷನ್ ಮೂಲಕ ಮೆರವಣಿಗೆಯು ಪುನಃ ಕುದ್ರೋಳಿ ದ್ವಾರ ತಲುಪಲಿದೆ.

ವಾಹನ ಸಂಚಾರದ ಬದಲಿ ಮಾರ್ಗಗಳ ವಿವರ

-ಕೊಟ್ಟಾರ ಚೌಕಿ ಜಂಕ್ಷನ್‌ನಿಂದ ಲೇಡಿಹಿಲ್ ಮೂಲಕ ಮಂಗಳೂರು ನಗರಕ್ಕೆ ಬರುವ ಎಲ್ಲಾ ವಾಹನಗಳು ಕುಂಟಿಕಾನ, ಕೆಪಿಟಿ ಮತ್ತು ನಂತೂರು ಮುಖಾಂತರ ಸಂಚರಿಸಬೇಕು.

-ಬಂಟ್ಸ್ ಹಾಸ್ಟೆಲ್‌ನಿಂದ ಪಿವಿಎಸ್ ಮೂಲಕ ಎಂ.ಜಿ. ರಸ್ತೆಯಲ್ಲಿ ಸಾಗುವ ವಾಹನಗಳು ಬಂಟ್ಸ್ ಹಾಸ್ಟೆಲ್ – ಭಾರತ್ ಬೀಡಿ – ಬಟ್ಟಗುಡ್ಡ – ಕೆಪಿಟಿ ಅಥವಾ ಬಂಟ್ಸ್ ಹಾಸ್ಟೆಲ್ – ಭಾರತ್ ಬೀಡಿ – ಮಲ್ಲಿಕಟ್ಟೆ ಮಾರ್ಗವಾಗಿ ಹೋಗಬೇಕು.

-ಕೆಎಸ್‌ಆರ್‌ಟಿಸಿ ಜಂಕ್ಷನ್‌ನಿಂದ ಲಾಲ್‌ಬಾಗ್ ಕಡೆಗೆ ಬರುವ ವಾಹನಗಳು ಕಾಪಿಕಾಡ್ – ಕುಂಟಿಕಾನ ಅಥವಾ ಬಿಜೈ ಬಟ್ಟಗುಡ್ಡ ಮಾರ್ಗವನ್ನು ಬಳಸಬೇಕು.

ಎಲ್ಲಾ ಕೆಎಸ್‌ಆರ್‌ಟಿಸಿ ಬಸ್ಸುಗಳು ಕೆಎಸ್‌ಆರ್‌ಟಿಸಿ ಜಂಕ್ಷನ್‌ನಿಂದ ಕಾಪಿಕಾಡ್ – ಕುಂಟಿಕಾನ ಅಥವಾ ಬಿಜೈ ಬಟ್ಟಗುಡ್ಡದ ಮೂಲಕ ಸಂಚರಿಸಬೇಕು.

-ಹಂಪನಕಟ್ಟೆಯಿಂದ ಕೆ.ಎಸ್‌.ಆರ್. ರಸ್ತೆ ಮತ್ತು ನವಭಾರತ ವೃತ್ತದ ಮೂಲಕ ಪಿವಿಎಸ್ ಕಡೆಗೆ ತೆರಳುವ ವಾಹನಗಳು ಹಂಪನಕಟ್ಟೆ – ಎಲ್.ಎಚ್.ಹೆಚ್ – ಅಂಬೇಡ್ಕರ್ ಜಂಕ್ಷನ್ ಮೂಲಕ ಸಾಗಬೇಕು.

-ನ್ಯೂ ಚಿತ್ರಾ ಜಂಕ್ಷನ್‌ನಿಂದ ನವಭಾರತ ಕಡೆಗೆ ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸುವುದು.

-ಲೇಡಿಹಿಲ್ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಮಣ್ಣಗುಡ್ಡೆ ಜಂಕ್ಷನ್ -ದುರ್ಗಾಮಹಲ್- ಮತ್ತು ಕುದ್ರೋಳಿ ದೇವಸ್ಥಾನ ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸಬೇಕು.

ವಾಹನ ನಿಲುಗಡೆಗೆ (ಪಾರ್ಕಿಂಗ್) ಅವಕಾಶವಿರುವ ಸ್ಥಳಗಳು
ದಸರಾ ಮೆರವಣಿಗೆ ವೀಕ್ಷಿಸಲು ಆಗಮಿಸುವ ಸಾರ್ವಜನಿಕರು ತಮ್ಮ ವಾಹನಗಳನ್ನು ಕರಾವಳಿ ಮೈದಾನ, ಅಳಕೆ ಮಾರ್ಕೆಟ್, ಉರ್ವ ಮಾರ್ಕೆಟ್ ಮೈದಾನ, ಉರ್ವ ಕೆನರಾ ಸ್ಕೂಲ್, ಕೆನರಾ ಡೊಂಗರಕೇರಿ ಸ್ಕೂಲ್, ಪೊಂಪೈ ಚರ್ಚ್, ದುರ್ಗಾಮಹಲ್ ಹೊಟೇಲ್, ಕುದ್ರೋಳಿ ನಾರಾಯಣ ಕಾಲೇಜು, ಬಿ.ಇ.ಎಂ. ಶಾಲಾ ಆವರಣ, ಕಾರ್ ಸ್ಟ್ರೀಟ್‌ನ ಸರ್ಕಾರದ ಹೆಣ್ಣುಮಕ್ಕಳ ಪ್ರೌಢಶಾಲೆ ಮತ್ತು ಹೊಟೇಲ್ ವಿಮಲೇಶ್ ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಬಹುದು.

ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಪೊಲೀಸ್ ಆಯುಕ್ತರು ವಿನಂತಿಸಿದ್ದಾರೆ.