Thursday, October 22, 2026
ಸುದ್ದಿ

ಮೈಸೂರು ದಸರಾ ಕೇಕ್‌ನಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಶೌರ್ಯಕ್ಕೆ ಗೌರವ- ಕಹಳೆ ನ್ಯೂಸ್

ಮೈಸೂರು: ದಸರಾ ಉತ್ಸವದಲ್ಲಿ  ಈ ಬಾರಿ ವಿಶೇಷ ಕೇಕ್‌ವೊಂದು ಗಮನ ಸೆಳೆದಿದೆ. ವಿಮಾನದಲ್ಲಿ ಸಹ-ಪೈಲಟ್‌ನ ದಾಳಿಗೆ ಒಳಗಾದರೂ ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಿ ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಶೌರ್ಯವನ್ನು ಕೇಕ್ ಮೂಲಕ ಗೌರವಿಸಲಾಗಿದೆ.

ಜಾಹೀರಾತು

ನಿನ್ನೆ ನಡೆದ ಉತ್ಸವದ ಕೇಕ್‌ಗಳ ಪ್ರದರ್ಶನದಲ್ಲಿ ಇತಿಹಾಸ, ಮಹಿಳಾ ಶಿಕ್ಷಣ ಹಾಗೂ ಪ್ರಕೃತಿಯ ಥೀಮ್‌ಗಳ ಜೊತೆಗೆ ಪೈಲಟ್‌ ಅವರ ಸಾಹಸದ ಕಥೆಯನ್ನೂ ಬಿಂಬಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೈಸೂರು ದಸರಾ ಕೇಕ್‌ಗಳ ಪ್ರದರ್ಶನದಲ್ಲಿ ಕ್ಯಾಪ್ಟನ್ ಮಚ್ಚರ್ ಅವರ ಶೌರ್ಯ ಮಾತ್ರವಲ್ಲದೆ, ಮೈಸೂರಿನ ಇತಿಹಾಸ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಕೇಕ್‌ಗಳೂ ಇದ್ದವು. ಕೃಷ್ಣರಾಜ ಒಡೆಯರ್ ಅವರ ಕಾಲದ ಜಗನ್ಮೋಹನ ಅರಮನೆಯ ವಿನ್ಯಾಸ ಹಾಗೂ ಮಹಿಳಾ ಶಿಕ್ಷಣಕ್ಕೆ ಬೆಂಬಲ ನೀಡಿದ ಮಹಾರಾಣಿ ಕೆಂಪನಂಜಮ್ಮಣಿ ಅವರ ಕೊಡುಗೆಯನ್ನು ಬಿಂಬಿಸುವ ಕೇಕ್‌ಗಳು ಪ್ರದರ್ಶನದಲ್ಲಿದ್ದವು. ಇದರ ಜೊತೆಗೆ ವಿವಿಧ ಪಕ್ಷಿಗಳು ಮತ್ತು ಪ್ರಾಣಿಗಳ ವಿನ್ಯಾಸಗಳನ್ನೂ ಕೇಕ್‌ಗಳಲ್ಲಿ ಮೂಡಿಸಲಾಗಿತ್ತು. ಹೀಗೆ ಇತಿಹಾಸ, ಶಿಕ್ಷಣ, ಪ್ರಕೃತಿ ಮತ್ತು ಧೈರ್ಯದ ಕಥೆಗಳನ್ನು ಒಂದೇ ವೇದಿಕೆಯಲ್ಲಿ ಬಿಂಬಿಸುವ ಮೂಲಕ ದಸರಾ ಕೇಕ್‌ಗಳ ಪ್ರದರ್ಶನ ವಿಶೇಷ ಗಮನ ಸೆಳೆದಿದೆ.