Recent Posts

Wednesday, October 7, 2026
ಸುದ್ದಿ

ಸಂಸೆ ಮೂರ್ನಾಡು ಕ್ಷೇತ್ರದ ಭಗವಾನ್ 1008ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಶ್ರೀ ಬ್ರಹ್ಮಯಕ್ಷ , ಶ್ರೀ ಮಹಾಮಾತೆ ವರಮಹಾಲಕ್ಷ್ಮೀ, ಶ್ರೀ ಮಹಾಮಾತೆ ಪದ್ಮಾವತಿ ಅಮ್ಮನವರ (ದೇವಸ್ಥಾನ) ಜಿನ ಮಂದಿರದ ಶಿಲ್ಯಾನ್ಯಾಸ ಕಾರ್ಯಕ್ರಮ -ಕಹಳೆ ನ್ಯೂಸ್

ಕಳಸ:ಸಂಸೆ ಮೂರ್ನಾಡು ಕ್ಷೇತ್ರದ ಭಗವಾನ್ 1008ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಶ್ರೀ ಬ್ರಹ್ಮಯಕ್ಷ , ಶ್ರೀ ಮಹಾಮಾತೆ ವರಮಹಾಲಕ್ಷ್ಮೀ, ಶ್ರೀ ಮಹಾಮಾತೆ ಪದ್ಮಾವತಿ ಅಮ್ಮನವರ (ದೇವಸ್ಥಾನ) ಜಿನ ಮಂದಿರದ ಶಿಲ್ಯಾನ್ಯಾಸ ಕಾರ್ಯಕ್ರಮ ಪಂಚಪೀಠಾಧಿಪತಿಗಳ ಸಮಗಮ ದೊಂದಿಗೆ ವೈಭವದಿಂದ ಜರುಗಿತು.
ಕಾರ್ಕಳ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಕನಕಗಿರಿ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಅರಹಂತಗಿರಿ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಧವಳಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಎನ್.ಆರ್.ಪುರ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಆರತಿಪುರ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಸಿದ್ಧಾಂತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಗಳವರು ಪಾವನ ಸಾನಿಧ್ಯ ವಹಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆರವರ ಮತ್ತು ಹೇಯಾವತಿ ವೀ ಹೆಗ್ಗಡೆಯವರ ಶುಭ ಅಶೀರ್ವದ ದೊಂದಿಗೆ , ಡಿ. ಹರ್ಷೇಂದ್ರ ಕುಮಾರ್ ಮಾರ್ಗದರ್ಶದಲ್ಲಿ ( ಅವರ ಅನುಪಸ್ಥಿತಿಯಲ್ಲಿ) ಡಿ. ಸುರೇಂದ್ರ ಕುಮಾರ್ ಶ್ರೀ ಕ್ಷೇತ್ರ ಧರ್ಮಸ್ಥಳ ಇವರು ಧಾರ್ಮಿಕ ಸಭಾ ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಿ ಮತ್ತು ಅಧ್ಯಕ್ಷತೆಯನ್ನು ವಹಿಸಿದ್ದರು
ಸಂಸೆ ಜೈನ ಸಮಾಜದ ಹಿರಿಯರಾದ ಶ್ರೀಯುತ ಸುದರ್ಶನ್ ಶೆಟ್ಟಿ ಚಾವಡಿ ಮನೆ, ಜೈನ ತೀರ್ಥಕ್ಷೇತ್ರ ಕಮಿಟಿಯ ಉಪಾಧ್ಯಕ್ಷರಾದ ಶ್ರೀಯುತ ಸನ್ಮತಿ ಕುಮಾರ್ ಕೊಡಿಗೆ ಮನೆ
ಕಳಸ ಸೀಮೆಯ ಎಲ್ಲಾ ಬಸದಿಗಳ ಗೌರವಾನ್ವಿತ ಅಧ್ಯಕ್ಷರುಗಳು ಸಂಸೆ ಸಂತಾಲಾರೆನ್ಸ್ ಚರ್ಚಿನ ಧರ್ಮ ಗುರುಗಳು ಕರ್ನಾಟಕ ಜೈನ ಅಸೋಸಿಯೇಷನ್ ಉಪಾಧ್ಯಕ್ಷರದ ಶ್ರೀಯುತ ರಾಜಕೀರ್ತಿ ಬೆಂಗಳೂರು ಇನ್ನು ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದು ಜೊತೆಗೆ ಸಂಸೆ ಮೂರ್ನಾಡು ಗ್ರಾಮದ ಪ್ರತಿಯೊಬ್ಬರು ಜಾತಿ ಮತ ಪಂಥ ಭೇದವಿಲ್ಲದೆ ಭಾಗವಹಿಸಿ.ಕಳಸ ಸೀಮೆಯ ಸಮಸ್ತ ಸಮಾಜ ಬಾಂಧವರ ಒಗ್ಗೂಡುವಿಕೆಯೊಂದಿಗೆ ಈ ಧಾರ್ಮಿಕ ಪೂಜಾ ವಿಧಿ ವಿಧಾನ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣ ಶ್ರದ್ಧಾಪೂರ್ವಕವಾಗಿ ಸಂಪನ್ನಗೊಂಡಿತು

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು