ನ್ಯಾಯವಾದಿಗಳ ವಿರುದ್ದ ದಾಖಲಿಸಿರುವ ಸುಳ್ಳು ಪ್ರಕರಣವನ್ನು ತೀವ್ರವಾಗಿ ಖಂಡಿಸುತ್ತೇನೆ ಮತ್ತು ಈ ಸುಳ್ಳು ಪ್ರಕರಣವನ್ನು ತಕ್ಷಣ ಕೈ ಬಿಡುವಂತೆ ಎಚ್ಚರಿಕೆ ನೀಡುತ್ತಿದ್ದೇನೆ : ಬಜರಂಗದಳ ಜಿಲ್ಲಾ ಸಹ ಸಂಯೋಜಕ ಸಂತೋಷ್ ಸರಪಾಡಿ- ಕಹಳೆ ನ್ಯೂಸ್

ಬಿ.ಸಿ ರೋಡಿನಲ್ಲಿ ನಡೆದ ಬಿ.ಸಿ ರೋಡ್ ಚಲೋ ಪ್ರತಿಭಟನಾ ಸಭೆಯಲ್ಲಿ ಪ್ರಸಿದ್ದ ವಕೀಲರಾದ ಶ್ರೀ ಪ್ರಸಾದ್ ಕುಮಾರ್ ರೈ ಅವರು ಬಜರಂಗದಳದ ಜಿಲ್ಲಾ ಸಂಯೋಜಕ ಶ್ರೀ ಭರತ್ ಕುಮ್ಡೇಲ್ ಮತ್ತು ಇತರರ ಮೇಲಿನ ಪ್ರಕರಣದಲ ಬಗ್ಗೆ ನ್ಯಾಯಾಲಯದ ಪ್ರಕ್ರೀಯೆಯ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎನ್ನುವ ಅರೋಪದಡಿಯಲ್ಲಿ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ವಕೀಲರಾದ ಶ್ರೀ ಪ್ರಸಾದ್ ಕುಮಾರ್ ರೈಯವರ ವಿರುದ್ದ ದೂರು ದಾಖಲಿಸಿದ ವಿಚಾರವು ಗಮನಕ್ಕೆ ಬಂದಿರುತ್ತದೆ ಈ ರೀತಿ ಸುಳ್ಳು ದೂರು ನೀಡಿರುವುದನ್ನು ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ ಮತ್ತು ಇದರ ವಿರುದ್ದ ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತೆವೆ. ಈ ಪ್ರಕರಣದಲ್ಲಿ ಕೆಲವು ಅಮಾಯಕರ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡಿ ಅವರನ್ನು ಜೈಲಿನಲ್ಲಿರಿಸಿ ಅವರು ಹೊರ ಬಾರದಂತೆ ತಡೆಯುವ ಕೆಲಸ ಸರಕಾರ ಮತ್ತು ಪೋಲಿಸ್ ಇಲಾಖೆ ಸತತವಾಗಿ ಮಾಡುತ್ತಲೆ ಬಂದಿರುತ್ತದೆ. ಆದರೆ ಇದರ ವಿರುದ್ದ ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡಿ ಭರತ್ ಕುಮ್ಡೇಲ್ ಮತ್ತು ಇನ್ನಿತರ ಕಾರ್ಯಕರ್ತರನ್ನು ಹೊರತರುವ ಕೆಲಸವನ್ನು ಕಾನೂನಾತ್ಮಕವಾಗಿ ನಡೆದರು ಆ ಅಮಾಯಕರ ಮೇಲೆ ಗೂಂಡಾಕಾಯ್ದೆ ಹಾಕಿರುವುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಇದರ ಬಗ್ಗೆ ಸವಿಸ್ತಾರವಾಗಿ ಪ್ರತಿಭಟನಾ ಸಭೆಯಲ್ಲಿ ಪ್ರಾಸ್ತಾವಿಕ ಭಾಷಣದಲ್ಲಿ ನ್ಯಾಯಾಲದಲ್ಲಿ ನಡೆದ ವಾದ ವಿವಾದದ ವಿಷಯವನ್ನು ಯಾವುದೇ ಅಪಮಾನಕವಾದ ಯಾವುದೇ ಅವಹೇಳನಕಾರಿಯಾದ ಸಂವಿಧಾನ ವಿರೋಧಿಯಾದ ಯಾವುದೇ ಶಬ್ಧಗಳನ್ನು ಉಚ್ಚರಿಸದೆ ನ್ಯಾಯಯುತವಾಗಿ ಸಾರ್ವಜನಿಕರಿಗೆ ಸ್ಪಷ್ಟವಾಗಿ ತಿಳಿಸಿದ ಕಾರಣ ವಕೀಲರಾದ ಪ್ರಸಾದ್ ಕುಮಾರ್ ರೈವರ ಮೇಲೆ ಸುಳ್ಳು ದೂರು ದಾಖಲು ಮಾಡಿರುವುದು ತೀವ್ರವಾಗಿ ಖಂಡಿಸುತ್ತೆವೆ. ಮತ್ತು ಆದರೆ ನಾವು ಗಮನಿಸಬೇಕಾದ ಅಂಶವೆಂದರೆ ಹಿಂದೂ ಕಾರ್ಯಕರ್ತರ ಪರವಾಗಿ ಯಾರು ಧ್ವನಿ ಎತ್ತುತ್ತಾರೋ ಅವರ ಧ್ವನಿಯನ್ನು ಅಡಗಿಸುವ ಪ್ರಕ್ರೀಯೆ ಮೊದಲಿನಿಂದಲು ನಡೆಯುತ್ತಲೆ ಬಂದಿದೆ. ಒಂದು ಸಮುದಾಯದ ಜನರನ್ನು ಮೆಚ್ಚಿಸಲು ಸರಕಾರ ಪೋಲಿಸ್ ಇಲಾಖೆಯನ್ನು ದುರುಪಯೋಗ ಪಡಿಸಿಕೊಂಡು ಈ ರೀತಿ ಮಾಡುವುದನ್ನು ನಾವು ಎಲ್ಲಿ ಪ್ರಶ್ನಿಸಬೇಕು ಅಲ್ಲಿ ಕಾನೂನಾತ್ಮಕವಾಗಿ ಪ್ರಶ್ನಿಸುತ್ತೇವೆ ಎಂದು ಈ ಸಂದರ್ಭದಲ್ಲಿ ಪತ್ರಿಕೆಯ ಮೂಲಕ ತಿಳಿಸಲು ಇಚ್ಚೆಪಡುತ್ತೆವೆ.










