Friday, October 2, 2026
ಸುದ್ದಿ

ದ.ಕ.ಜಿ.ಪ.ಉ.ಹಿ.ಪ್ರಾಥಮಿಕ ಶಾಲೆ ಬಡಗಕಜೆಕಾರು ನಲ್ಲಿ ಮೂರುದಿನಗಳ ವ್ಯಕ್ತಿತ್ವ ವಿಕಸನ ಶಿಬಿರಕ್ಕೆ ಚಾಲನೆ- ಕಹಳೆ ನ್ಯೂಸ್

ದ.ಕ.ಜಿ.ಪ.ಉ.ಹಿ.ಪ್ರಾಥಮಿಕ ಶಾಲೆ ಬಡಗಕಜೆಕಾರು ನಲ್ಲಿ 

ಜಾಹೀರಾತು

 ಮೂರುದಿನಗಳ ವ್ಯಕ್ತಿತ್ವ ವಿಕಸನ ಶಿಬಿರಕ್ಕೆ ಚಾಲನೆ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

 

ಬಂಟ್ವಾಳ : ದ.ಕ.ಜಿ.ಪ.ಉ.ಹಿ.ಪ್ರಾಥಮಿಕ ಶಾಲೆ ಬಡಗಕಜೆಕಾರು ಇಲ್ಲಿ ಕೆ.ವೈ.ಪೂಜಾರಿ ಕುಟುಂಬಿಕರ ವತಿಯಿಂದ ಸೆಪ್ಟಂಬರ್ 30 ರಿಂದ ಅಕ್ಟೋಬರ್ 2ರ ತನಕ ನಡೆಯುವ ಮೂರುದಿನಗಳ ವ್ಯಕ್ತಿತ್ವ ವಿಕಸನ ಶಿಬಿರಕ್ಕೆ ಚಾಲನೆ ನೀಡಲಾಯಿತು.

 

ಉಳಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ರವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಕೆ.ವೈ.ಪೂಜಾರಿ ಕುಟುಂಬಿಕರಾದ ನಿವೃತ್ತ ವಿಂಗ್ ಕಮಾಂಡರ್ ಕರುಣಾಮಯಿ ಕಜೆಕಾರು ಉಪಸ್ಥಿತರಿದ್ದರು.

 

ಮೊದಲ ದಿನದ ಕಾರ್ಯಕ್ರಮದ ಅಂಗವಾಗಿ ಟಿಜಿಟಿ ಶಿಕ್ಷಕ ಹರೀಶ ಮೂಲ್ಯರವರು ಭಾಷಣ ಕಲೆ ಹಾಗೂ ಆಟಿಕೆಯಲ್ಲಿ ವಿಜ್ಞಾನ ಎಂಬ ವಿಷಯಗಳನ್ನು ಪ್ರಸ್ತುತಪಡಿಸಿದರು.

ಪವಿತ್ರ ಬಿ.ಕೆ ರವರು ರಂಗೋಲಿ ಬಿಡಿಸುವ ಬಗ್ಗೆ ಹಾಗೂ ಪೂರ್ಣಿಮಾ ರವರು ನೃತ್ಯಭರಿತ ಹಾಡುಗಳನ್ನು ಕಲಿಸಿದರು.

 

ಶಾಲಾ ಮುಖ್ಯ ಶಿಕ್ಷಕಿ ಹೇಮಾವತಿ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು.ಗೌರವ ಶಿಕ್ಷಕಿ ರೂಪಾ ವಂದಿಸಿದರು ಗೌರವ ಶಿಕ್ಷಕಿ ಪವಿತ್ರ ಬಿ.ಕೆ. ಕಾರ್ಯಕ್ರಮ ನಿರೂಪಿಸಿದರು.