Friday, October 2, 2026
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಎಂಆರ್‌ಪಿಎಲ್‌ ಸ್ಫೋಟದಿಂದ 54 ಮನೆಗಳು, ದೇವಸ್ಥಾನದ ಸಭಾಂಗಣ, ಚರ್ಚ್‌, ಮಸೀದಿಗೆ ಹಾನಿ – ಕಹಳೆ ನ್ಯೂಸ್

ಮಂಗಳೂರು: ಸ್ಫೋಟದ ಕಂಪನಕ್ಕೆ ಬಾಳ ಗ್ರಾಮದ 10, ಕಳವಾರು ಗ್ರಾಮದ 19 ಮತ್ತು ತೋಕೂರು ಗ್ರಾಮದ 25 ಮನೆಗಳ ಸಹಿತ ಒಟ್ಟು 54 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ದೇವಸ್ಥಾನ, ಚರ್ಚ್‌, ಮಸೀದಿ ಸಹಿತ ಒಟ್ಟು 8 ಧಾರ್ಮಿಕ ಕೇಂದ್ರಗಳಿಗೆ ಹಾನಿಯಾಗಿದೆ ಎಂದು ಮಂಗಳೂರು ತಹಶೀಲ್ದಾರ್‌ ರಮೇಶ್‌ ಬಾಬು ತಿಳಿಸಿದ್ದಾರೆ.

ಜಾಹೀರಾತು

ಕಳವಾರು ಬೆಂಕಿನಾಥೇಶ್ವರ ದೇಗುಲ ಭವನ, ಸೈಂಟ್‌ ಜೋಸೆಫ್‌ ಚರ್ಚ್‌, ಜೋಕಟ್ಟೆಯ ಮೊಹಿಯುದ್ದೀನ್‌ ಹಳೆ ಜುಮಾ ಮಸೀದಿ, ಈದ್ಗಾ ಮಸೀದಿ, ಕಳವಾರು ಮಸೀದಿ ಮತ್ತು ಜೋಕಟ್ಟೆ ಅಂಜುಮಾನ್‌ ಶಾಲೆಗೆ ಹಾನಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ದೇವಸ್ಥಾನದ ಪಕ್ಕದ ಸಭಾ ಭವನದ ಕಿಟಕಿ ಗಾಜುಗಳು ಪುಡಿಯಾಗಿವೆ. ಗುತ್ತಿನ ಮನೆಯ ಗೋಡೆಯಲ್ಲಿ ಬಿರುಕು ಮೂಡಿದೆ. ಕಳವಾರು ಸೈಂಟ್‌ ಜೋಸೆಫ್‌ ಚರ್ಚ್‌ನ ಹೆಂಚುಗಳು ಹಾರಿ ಬಿದ್ದಿವೆ. ಪಕ್ಕದ  ಧರ್ಮಗುರುಗಳ ನಿವಾಸದ ಹೆಂಚುಗಳೂ ಬಿದ್ದಿವೆ. ಜೋಕಟ್ಟೆ ನಡುಮನೆಯ ರಜಾಕ್‌ ಅವರ ಪುತ್ರಿ ಕಂಪನದಿಂದಾಗಿ ಮಂಚದಿಂದ ಕೆಳಗೆ ಬಿದ್ದ ಪರಿಣಾಮ ಕೈಗೆ ಗಾಯವಾಗಿದೆ. ಜೋಕಟ್ಟೆ ಹರಿಕೆರೆಯ ಅಬ್ದುಲ್‌ ರಹಿಮಾನ್‌ ಅವರ ಮನೆಯ ಕಿಟಕಿಯ ಗಾಜು ಪುಡಿಯಾಗಿದೆ. ಇದೇ ಪರಿಸರದ ಹಲವು ಮನೆಗಳಿಗೆ ಹಾನಿಯಾಗಿದೆ.

ಸಿಲಿಂಡರ್‌ ಸ್ಫೋಟ ಎಂದುಕೊಂಡೆವು
“ಗ್ಯಾಸ್‌ ಸಿಲಿಂಡರ್‌ ಸ್ಫೋಟವಾಗಿರ ಬಹುದು ಎಂದುಕೊಂಡೆವು. ಅನಂತರ ನಿಜ ವಿಷಯ ತಿಳಿಯಿತು’ ಎಂದು ಮಸೀದಿ ಅಧ್ಯಕ್ಷ ರಶೀದ್‌ ತಿಳಿಸಿದ್ದಾರೆ.

“ಸದ್ದು ಕೇಳಿ ಮನೆಯಿಂದ ಹೊರಗೆ ಬಂದಾಗ ಬೆಂಕಿ, ದಟ್ಟ ಹೊಗೆ ಕಂಡಿತು. ಬಳಿಕ ನಮ್ಮ ಮನೆ ಪಕ್ಕದಿಂದ ಅಲ್ಲಿಗೆ ಕೆಲಸಕ್ಕೆ ಹೋದವರಿಗೆ ಕರೆ ಮಾಡಿ ಕೇಳಿದೆವು. ಅವರು ಸ್ಫೋಟ ನಡೆದ ಸ್ಥಳದಿಂದ ಸ್ವಲ್ಪ ಸಮಯದ ಮೊದಲು ವಿಶ್ರಾಂತಿಗಾಗಿ ಬೇರೆ ಸ್ಥಳಕ್ಕೆ ಹೋಗಿದ್ದು ತಿಳಿಯಿತು’ ಎನ್ನುತ್ತಾರೆ ಸಿಲ್ವಿಯಾ.