Thursday, October 1, 2026
ಜಿಲ್ಲೆಮಂಗಳೂರುರಾಜ್ಯಸುದ್ದಿ

ಮಂಗಳೂರು: MRPL ಭಾಗದಲ್ಲಿ ದೊಡ್ಡ ಸದ್ದಿನೊಂದಿಗೆ ಭಾರಿ ಸ್ಪೋಟ ಜೋಕಟ್ಟೆ ಪರಿಸರದಲ್ಲಿ ಆತಂಕ – ಕಹಳೆ ನ್ಯೂಸ್

ಮಂಗಳೂರು: ನಗರದ ಹೊರವಲಯದ MRPL ಭಾಗದಲ್ಲಿ ಇಂದು ದೊಡ್ಡ ಸದ್ದಿನೊಂದಿಗೆ ಗಂಭೀರ ಸ್ಪೋಟ ಸಂಭವಿಸಿದ ಘಟನೆ ನಡೆದಿದೆ.

ಜಾಹೀರಾತು

ಸಹಿತ ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ, ಸ್ಪೋಟದ ತೀವ್ರತೆಗೆ ಜೋಕಟ್ಟೆ ಗ್ರಾಮ ಪಂಚಾಯತ್ ಕಟ್ಟಡ ಸುತ್ತಮುತ್ತಲಿನ ಮನೆಗಳು ಅದುರಿವೆ. ಕೆಲವು ಮನೆಗಳ ಬಾಗಿಲು ಕಿಟಕಿಗಳು ಉದುರಿವೆ ಎಂದು ಹೇಳಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಪೋಟದ ಬಳಿಕ ಆಕಾಶದಲ್ಲಿ ದಟ್ಟ ಹೊಗೆ ಎದ್ದಿದ್ದು, ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.ಘಟನೆ ಕುರಿತು ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.

ಘಟನೆಯ ಬಳಿಕ ಸ್ಥಳೀಯರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದು, ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುವ ನಿರೀಕ್ಷೆಯಿದೆ.