ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ದ.ಕ. ಜಿಲ್ಲೆ ಮಂಗಳೂರು ಹಾಗೂ ತುಂಬೆ ಪದವಿ ಪೂರ್ವ ಕಾಲೇಜು ಇದರ ಜಂಟಿ ಆಶ್ರಯದಲ್ಲಿ ಕರಾಟೆ ಚಾಂಪಿಯನ್‌ಶಿಪ್ ಫಿಲೋಮಿನಾ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ – ಕಹಳೆ ನ್ಯೂಸ್

ಪುತ್ತೂರು : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ದ.ಕ. ಜಿಲ್ಲೆ ಮಂಗಳೂರು ಹಾಗೂ ತುಂಬೆ ಪದವಿ ಪೂರ್ವ ಕಾಲೇಜು ಇದರ ಜಂಟಿ ಆಶ್ರಯದಲ್ಲಿ ಸೆ19 ರಂದು ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಭುವನ್ ಕರಂದ್ಲಾಜೆ ಬೆಳ್ಳಿ ಹಾಗೂ ದ್ವಿತೀಯ ವಿಜ್ಞಾನ ವಿಭಾಗದ ಏಂಜೆಲ್ ಜೆ ಅವರು ಕಂಚಿನ ಪದಕವನ್ನು ಪಡೆದಿರುತ್ತಾರೆ.
ಭುವನ್ ಕರಂದ್ಲಾಜೆ ಇವರು ಲಕ್ಷ್ಮಣ ಕರಂದ್ಲಾಜೆ ಹಾಗೂ ಸುಪ್ರೀತಾ ಲಕ್ಷ್ಮಣ ಕರಂದ್ಲಾಜೆ ದಂಪತಿಗಳ ಪುತ್ರನಾಗಿದ್ದು, ನಾರಾಯಣ ಆಚಾರ್ಯ ತರಬೇತಿಯನ್ನು ನೀಡಿರುತ್ತಾರೆ. ಏಂಜೆಲ್ ಜೆ ಸಂಪಾಜೆ ನಿವಾಸಿ ಜೋಸೆಫ್ ವೈ ಮತ್ತು ವಿಜಯಲಕ್ಷ್ಮಿ ದಂಪತಿಗಳ ಪುತ್ರಿ. ಇವರಿಗೆ ಚಂದ್ರಶೇಖರ್ ಕನಕ ಮಜಲು ತರಬೇತಿ ನೀಡುತ್ತಾರೆ. ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.










