ಬೆಂಗಳೂರು: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು ನಟ ಅನಂತ್ ನಾಗ್‌ಗೆ ವಿಧಾನ ಪರಿಷತ್‌ನಲ್ಲಿ ಅಭಿನಂದನೆ ಸಲ್ಲಿಸಲಾಯ್ತು. ಕಲಾಪ ಪ್ರಾರಂಭ ಆದ ಕೂಡಲೇ ಸಭಾಪತಿಗಳು ಅಭಿನಂದನೆ ನಿರ್ಣಯ ಮಂಡಿಸಿದರು.
ಈ ವೇಳೆ ಮಾತಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ , ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿರೋದು ಕನ್ನಡ ರಾಜ್ಯಕ್ಕೆ ಗೌರವ ತಂದಿದೆ. ಪ್ರಶಸ್ತಿ ಕೊಟ್ಟ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಅನಂತ್ ನಾಗ್ ಸಹಜ ನಟರು, ಕಲಾತ್ಮಕ ಚಿತ್ರಗಳಲ್ಲಿ ನಟನೆ ಮಾಡಿ ವಿಶ್ವಕ್ಕೆ ಹೆಸರಾದವರು. ಕಲಾತ್ಮಕ ಚಿತ್ರಗಳಿಗೆ ಅನಂತ್ ಕೊಡುಗೆ ಜಾಸ್ತಿ ಇದೆ. ಅವರ ಚಿತ್ರಗಳನ್ನು ನಾವು ಬಾಲ್ಯದಲ್ಲಿ ನೋಡಿ ಬೆಳೆದಿದ್ದೇವೆ. ರಾಜಕೀಯದಲ್ಲಿ ಇದ್ದರು. ಅನಂತ್ ನಾಗ್ ಜನತಾ ದಳದಲ್ಲಿ ನಗರಾಭಿವೃದ್ಧಿ ಇಲಾಖೆ ಸಚಿವರಾಗಿದ್ದರು. ಅವರಿಗೆ ಪ್ರಶಸ್ತಿ ಬಂದಿರೋದು ನಮಗೆ ಖುಷಿ ನೀಡಿದೆ ಎಂದರು.
ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತಾಡಿ, ಇದು ಕರ್ನಾಟಕದ ಜನರಿಗೆ ಸಲ್ಲುವ ಗೌರವ. ಅನಂತ್ ನಾಗ್ ಬಹುಮುಖ ಪ್ರತಿಭೆ. ಚಿತ್ರರಂಗದಲ್ಲಿ ಮೇರು ವ್ಯಕ್ತಿ ಪ್ರದರ್ಶನ ಮಾಡಿದ್ರು. ಅನಂತ್ ನಾಗ್ಗಿಂತ ಶಂಕರ್ ನಾಗ್ ಒಂದು ಕೈ ಮೇಲು ಇತ್ತು. ಇಬ್ಬರು ಸಹೋದರರು ಚಿತ್ರರಂಗಕ್ಕೆ ಮೆರಗು ನೀಡಿದ್ರು. ಬೇರೆ ಭಾಷಯಲ್ಲಿ ನಟನೆ ಮಾಡಿದ್ದಾರೆ. ನಾ ನಿನ್ನ ಬಿಡಲಾರೆ ಚಿತ್ರದಲ್ಲಿ ಅವರ ನಟನೆ ನನಗೆ ಇಷ್ಟ. ನಾನು 11 ಬಾರಿ ಆ ಚಿತ್ರ ನೋಡಿದ್ದೆ. ಅನಂತ್ ನಾಗ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಕೇಂದ್ರ ಕೊಟ್ಟಿರೋದು ಕರ್ನಾಟಕಕ್ಕೆ ಹೆಮ್ಮೆ. ಅವರ ಸೇವೆ ಮುಂದುವರೆಯಲು, ವಯೋ ಸಹಜ ಪಾತ್ರ ಮಾಡ್ತಾ ಇದ್ದಾರೆ. ಅವರಿಗೆ ಆಯಸ್ಸು, ಆರೋಗ್ಯ ದೇವರು ಕರುಣಿಸಲಿ ಎಂದರು. ಇಡೀ ಸದನ ಅನಂತ್ ನಾಗ್‌ಗೆ ಗೌರವ ಸಲ್ಲಿಸಿತು.











