
ಪುತ್ತೂರು: ಇಲ್ಲಿನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ) ಇದರ ಎನ್. ಸಿ. ಸಿ ಘಟಕದ ತೃತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಅಕ್ಷತಾ. ಎ (ಮೋಹನ. ಎ ಮತ್ತು ಶೇಷಮ್ಮ.ಎಂ ಇವರ ಪುತ್ರಿ) ಇವರು ದೆಹಲಿಯಲ್ಲಿ ನಡೆಯುತ್ತಿರುವ ಆಲ್ ಇಂಡಿಯಾ ತಲ್ ಸೈನಿಕ್ ಕ್ಯಾಂಪ್‍ಗೆ ಆಯ್ಕೆಯಾಗಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳಾದ ತಿಲಕ್ ಹೆಚ್. ವಿ (ಕೊಡಗು ಹೆಬ್ಬಾಲೆ ನಿವಾಸಿ ವಿಜಯ ಹೆಚ್.ಎಸ್, ಕವಿತಾ ಹೆಚ್. ಕೆ ದಂಪತಿಗಳ ಪುತ್ರ) ಸಂದೇಶ್ (ಕೊಲ್ಯ ನಿವಾಸಿ ತನಿಯಪ್ಪ ಗೌಡ, ಲಕ್ಷ್ಮೀ ದಂಪತಿಗಳ ಪುತ್ರ) ರವಿಕಿರಣ್ ಎ (ಕಾಣಿಯೂರು ನಿವಾಸಿ ಪದ್ಮಯ್ಯ ಗೌಡ, ಆಶಾಲತ ದಂಪತಿಗಳ ಪುತ್ರ) ಭಾರತ ಸರಕಾರದ ಅಗ್ನಿಪಥ್ ಯೋಜನೆಯಡಿಯಲ್ಲಿ ಮೂರು ಹಂತದ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ. ಮತ್ತು ವಿದ್ಯಾರ್ಥಿ ಅಕ್ಷಯ್ ಇವರು ಇಂಡಿಯನ್ ಮಿಲಿಟರಿ ಅಕಾಡೆಮಿ ಡೆಹ್ರಾಡೂನ್ ಭಾರತೀಯ ಸೇನೆಗೆ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಇವರಿಗೆ ಕಾಲೇಜಿನ ಎನ್. ಸಿ. ಸಿ ಘಟಕದ ಮುಖ್ಯಸ್ಥ ಲೆ. ಭಾಮಿ ಅತುಲ್ ಶೆಣೈ ಮಾರ್ಗದರ್ಶನ ನೀಡಿರುತ್ತಾರೆ. ಇವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಎನ್.ಸಿ.ಸಿ ಘಟಕ, ಐಕ್ಯೂಎಸಿ ಘಟಕ, ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದ ಹಾಗೂ ವಿದ್ಯಾರ್ಥಿ ವೃಂದ ಶುಭಾಶಯಗಳನ್ನು ಕೋರಿದ್ದಾರೆ.











