Wednesday, September 2, 2026
ಸುದ್ದಿ

ಅಯೋಧ್ಯೆ ರಾಮಮಂದಿರಕ್ಕೆ ಮೂವರು ಹೊಸ ಟ್ರಸ್ಟಿಗಳ ನೇಮಕ – ಕಹಳೆ ನ್ಯೂಸ್

ಲಕ್ನೋ: ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್  ಇದೀಗ ಮೂವರು ಹೊಸ ಟ್ರಸ್ಟಿಗಳ ನೇಮಕ ಮಾಡಿದೆ. ಶೀಘ್ರದಲ್ಲೇ ಹೊಸ ಸಿಇಓ (CEO) ಹೆಸರನ್ನು ಕೂಡ ಘೋಷಣೆ ಮಾಡಲಿದೆ.

ಜಾಹೀರಾತು

ದೆಹಲಿ ಮೂಲದ ಮಹೇಶ್ ಭಾಗ್ಚಂದ್ಕ, ಅಯೋಧ್ಯೆಯ ನಿವಾಸಿ ಮದನ್ ಮೋಹನ್ ಪಾಂಡೆ ಹಾಗೂ ಶಿಕೋಹಾಬಾದ್‌ನ ನಿರ್ಮಲಾ ಯಾದವ್ ಅವರನ್ನು ಹೊಸ ಟ್ರಸ್ಟಿಗಳನ್ನಾಗಿ ನೇಮಿಕ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮಹೇಶ್ ಭಾಗ್‌ಚಂದ್ಕಾ ಅವರು ದಿವಂಗತ ವಿಶ್ವ ಹಿಂದೂ ಪರಿಷತ್ ನಾಯಕ ಅಶೋಕ್ ಸಿಂಘಾಲ್ ಅವರ ಸಂಬಂಧಿ ಎಂದು ತಿಳಿದುಬಂದಿದೆ. ಇನ್ನೂ ಮದನ್ ಮೋಹನ್ ಪಾಂಡೆ ಮತ್ತು ನಿರ್ಮಲಾ ಯಾದವ್ ಅವರ ಹೆಸರನ್ನು ನೇಮಕಾತಿಯ ಕುರಿತು ರಾಮಮಂದಿರ ಟ್ರಸ್ಟ್‌ನ ಪ್ರಮುಖ ಸಭೆಯಲ್ಲಿ ನಿರ್ಧರಿಸಲಾಗಿದೆ.

ಟ್ರಸ್ಟ್‌ನ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ನಿವಾಸವಾದಲ್ಲಿ ಸಭೆ ನಡೆಯುತ್ತಿದ್ದು, ಸಭೆ ಮುಕ್ತಾಯದ ಬಳಿಕ ಹೊಸ ಸಿಇಓ ಹೆಸರು ಪ್ರಕಟವಾಗಲಿದೆ.