Thursday, August 27, 2026
ದೆಹಲಿರಾಜ್ಯಸುದ್ದಿ

ಸ್ನೇಹ ಬೆಳೆಸಲು ನಿರಾಕರಿಸಿದಕ್ಕೆ ಮಾಡೆಲ್‌ ಕೊಲೆ – ಮನೆಗೆ ನುಗ್ಗಿ ಹತ್ಯೆಗೈದು ಜಿಮ್ ಟ್ರೇನರ್ ಪರಾರಿ – ಕಹಳೆ ನ್ಯೂಸ್

ನವದೆಹಲಿ: ಸ್ನೇಹ ಬೆಳೆಸಲು ನಿರಾಕರಿಸಿದ್ದಕ್ಕೆ ಜಿಮ್ ಟ್ರೇನರ್ ಮನೆಗೆ ನುಗ್ಗಿ ಮಾಡೆಲ್‌ ಅನ್ನು ಕೊಲೆ ಮಾಡಿರುವ ಘಟನೆ ದೆಹಲಿಯ ತಿಲಕ್ ನಗರದಲ್ಲಿ ನಡೆದಿದೆ.

ಜಾಹೀರಾತು

ಮಾಡೆಲ್‌ ಆಗಿದ್ದ 21 ವರ್ಷದ ಮುಸ್ಕಾನ್ ಮೃತ ಯುವತಿ. ಆರೋಪಿಯನ್ನು ಇಮ್ರಾನ್ ಎಂದು ಗುರುತಿಸಲಾಗಿದ್ದು, ಜಿಮ್ ಟ್ರೇನರ್ ಆಗಿದ್ದ. ಘನಟೆ ನಡೆದಾಗ ಮನೆಯಲ್ಲಿ ಯುವತಿ ಒಬ್ಬಂಟಿಯಾಗಿದ್ದರು ಎಂದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪೊಲೀಸರ ಮಾಹಿತಿ ಪ್ರಕಾರ, ಯುವತಿಗೆ ಸ್ವಲ್ಪ ಸಮಯದಿಂದ ಆರೋಪಿ ಪರಿಚಿತನಾಗಿದ್ದ. ಜಿಮ್‌ಗೆ ಹೋಗುತ್ತಿದ್ದಾಗ ಮುಸ್ಕಾನ್‌ಗೆ ಇಮ್ರಾನ್ ಪರಿಚಯವಾಗಿದ್ದ, ಅಲ್ಲದೇ ಭೇಟಿಯಾದಾಗಿನಿಂದಲೂ ಆಕೆಯೊಂದಿಗೆ ಸ್ನೇಹ ಬೆಳೆಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದ. ಇದೀಗ ಮನೆಯಲ್ಲಿ ಯಾರೂ ಇಲ್ಲದನ್ನು ತಿಳಿದು, ಮನೆಗೆ ನುಗ್ಗಿ ಕೊಲೆ ಮಾಡಿ, ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ, ತನಿಖೆ ಆರಂಭಿಸಿದೆ. ಆರೋಪಿಯನ್ನು ಪತ್ತೆಹಚ್ಚಲು ಮತ್ತು ಘಟನೆಯ ಬಗ್ಗೆ ತಿಳಿಯಲು ಹತ್ತಿರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಈವರೆಗೂ ಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸದ್ಯ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.