
ಪುತ್ತೂರು : ಪ್ರಕೃತಿಯನ್ನು ಮೊದಲು ಅರ್ಥಮಾಡಿಕೊಂಡು, ಅದರೊAದಿಗೆ ನೇರವಾಗಿ ಬೆರೆಯುವುದರ ಜೊತೆಗೆ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಡಿಜಿಟಲ್ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಪರಿಸರ ಜಾಗೃತಿ ಮೂಡಿಸುವಂತಹ ಅರ್ಥಪೂರ್ಣ ವಿಷಯಗಳನ್ನು ಸೃಷ್ಟಿಸಬೇಕು ಎಂದು ನಿವೃತ್ತ ಸಹಾಯಕ ಪ್ರಾಧ್ಯಾಪಕ ಪ್ರೊ. ದೇವಿಪ್ರಸಾದ್ ಕೆ.ಎನ್ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇಲ್ಲಿನ ಸಸ್ಯಶಾಸ್ತç ಮತ್ತು ಪ್ರಾಣಿಶಾಸ್ತç ವಿಭಾಗ ಹಾಗೂ ನೇಚರ್ ಕ್ಲಬ್ ಸಹಯೋಗದಲ್ಲಿ ನಡೆದ ನೇಚರ್ ಕ್ಲಬ್ ಉದ್ಘಾಟನೆ ಮತ್ತು “ಪರಿಸರ ಪರಿಚಯ: ನಿಸರ್ಗದೊಂದಿಗೆ ನಾವು” ಎಂಬ ವಿಷಯದ ಕುರಿತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಮಾತನಾಡಿ, ನೇಚರ್ ಕ್ಲಬ್ ಕೇವಲ ಒಳಾಂಗಣ ಚಟುವಟಿಕೆಗಳಿಗೆ ಸೀಮಿತವಾಗದೆ ವಿದ್ಯಾರ್ಥಿಗಳಿಗೆ ಪ್ರಕೃತಿಯೊಂದಿಗೆ ನೇರ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಿಯಮಿತವಾಗಿ ಪ್ರಕೃತಿ ಶಿಬಿರಗಳು ಹಾಗೂ ಹೊರಾಂಗಣ ಚಟುವಟಿಕೆಗಳನ್ನು ಆಯೋಜಿಸಬೇಕು ಎಂದು ಹೇಳಿದರು.
ನೇಚರ್ ಕ್ಲಬ್‌ನ ಸಂಯೋಜಕ ಡಾ.ಸುಹಾಸ್ ಕೃಷ್ಣ ಕ್ಲಬ್‌ನ ಉದ್ದೇಶಗಳು ಹಾಗೂ ಮುಂಬರುವ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ಸಸ್ಯಶಾಸ್ತç ವಿಭಾಗದ ಉಪನ್ಯಾಸಕ ಡಾ. ಸೌಮಿತ್ರ, ಪ್ರಾಣಿಶಾಸ್ತç ವಿಭಾಗದ ಉಪನ್ಯಾಸಕಿ ದಿವ್ಯಶ್ರೀ ಹಾಗೂ ವಿದ್ಯಾರ್ಥಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ತೃತೀಯ ಬಿ.ಎ.ಸ್ಸಿ ವಿಭಾಗದ ವಿದ್ಯಾರ್ಥಿನಿ ಸೌಜನ್ಯ ಸ್ವಾಗತಿಸಿ, ಪ್ರೇರಣಾ ವಂದಸಿ, ಜೀವಿತಾ ನಿರೂಪಿಸಿದರು.











