Thursday, August 27, 2026
ಸುದ್ದಿ

ಪಾಂಗಾಳ: ಸಾರ್ವಜನಿಕ ಗಣೇಶೋತ್ಸವ : 30ನೇ ವರ್ಷದ ಸಂಭ್ರಮ, ಬೃಹತ್ ರಕ್ತದಾನ ಮತ್ತು ಆರೋಗ್ಯ ಶಿಬಿರ- ಕಹಳೆ ನ್ಯೂಸ್

​ಪಾಂಗಾಳ: ಪಾಂಗಾಳದ 30ನೇ ವರ್ಷದ ಶ್ರೀ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಬೃಹತ್ ರಕ್ತದಾನ, ಉಚಿತ ಆರೋಗ್ಯ ತಪಾಸಣೆ ಹಾಗೂ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.

ಜಾಹೀರಾತು

​ಸಾಮಾಜಿಕ ಕಾರ್ಯದಿಂದ ಲಭಿಸುವ ಸಮಾಧಾನ ಶ್ರೇಷ್ಠ:
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪಾಂಗಾಳ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ವಕೀಲ ಶಿವಾನಂದ ಅಮೀನ್, “ಭಕ್ತರಿಗೆ ಗಣೇಶನ ಕೃಪೆ, ಆರೋಗ್ಯ ಹಾಗೂ ಮನಸ್ಸಿಗೆ ಸಮಾಧಾನ ದೊರೆಯಬೇಕು. ಊರಿನ ಗಣೇಶ ಹಬ್ಬದ ವಾತಾವರಣದಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಪಾಲ್ಗೊಂಡು ಆನಂದಿಸಬೇಕು. ಈ ನಿಟ್ಟಿನಲ್ಲಿ ಕಳೆದ 30 ವರ್ಷಗಳಿಂದ ಸಮಿತಿಯು ಅನೇಕ ಸಾರ್ವಜನಿಕ ಉಪಯುಕ್ತ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿರುವುದು ತೃಪ್ತಿ ತಂದಿದೆ. ಈ ಉತ್ಸವದ ಯಶಸ್ಸಿಗೆ ಶ್ರಮಿಸುತ್ತಿರುವ ಪ್ರತಿಯೊಬ್ಬ ಭಕ್ತಾದಿಗಳಿಗೆ ಸಮಿತಿಯ ಪರವಾಗಿ ಧನ್ಯವಾದಗಳು” ಎಂದು ಹಿತವಚನ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

​ಆರೋಗ್ಯ ತಪಾಸಣೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು:
ಉತ್ಸವದ ಭಾಗವಾಗಿ ಹಮ್ಮಿಕೊಳ್ಳಲಾಗಿದ್ದ ಉಚಿತ ರಕ್ತದಾನ ಶಿಬಿರದಲ್ಲಿ ಸುಮಾರು 75 ಕ್ಕೂ ಹೆಚ್ಚು ದಾನಿಗಳು ರಕ್ತದಾನ ಮಾಡಿದರು. ಜೊತೆಗೆ 100ಕ್ಕೂ ಹೆಚ್ಚು ಜನರು ಸಾಮಾನ್ಯ ಆರೋಗ್ಯ ತಪಾಸಣೆ ಹಾಗೂ 50ಕ್ಕೂ ಹೆಚ್ಚು ಜನರು ಕಣ್ಣಿನ ತಪಾಸಣೆಯ ಸೌಲಭ್ಯ ಪಡೆದುಕೊಂಡರು. ರಂಗೋಲಿ ಸ್ಪರ್ಧೆ, ಗಣೇಶನ ಚಿತ್ರಕಲೆ, ಸಾಂಸ್ಕೃತಿಕ ನೃತ್ಯ, ಸಂಗೀತ ಹಾಗೂ ಭಜನಾ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವು.

​ಉದ್ಘಾಟನೆ ಮತ್ತು ಉಪಸ್ಥಿತಿ:
ಕಾರ್ಯಕ್ರಮದ ಉದ್ಘಾಟನೆಯನ್ನು ಪಾಂಗಾಳ ಶ್ರೀ ಸುಬ್ಬರಾವ್ ನೆರವೇರಿಸಿದರು. ವೇದಿಕೆಯಲ್ಲಿ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಯ ವೈದ್ಯರುಗಳು, ವಿಷ್ಣುಮೂರ್ತಿ ಭಟ್, ನಾಗರಾಜ್ ಭಟ್, ಸಮಿತಿಯ ಕಾರ್ಯದರ್ಶಿ ಸಚಿನ್ ಆಚಾರ್ಯ ಹಾಗೂ ಸಹನ್ ಉಪಸ್ಥಿತರಿದ್ದರು.

​ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿ ಕೊಟ್ಟ ಮಣಿಪಾಲದ ಕೆ.ಎಮ್.ಸಿ (KMC) ಆಸ್ಪತ್ರೆಯ ಆಡಳಿತ ಮಂಡಳಿಗೆ ಸಮಿತಿಯು ಕೃತಜ್ಞತೆ ಸಲ್ಲಿಸಿತು. ​ಅಂಬರ್‌ನಾಥ್ ಶೆಟ್ಟಿ, ಶೈಲೇಶ್ ಶೆಟ್ಟಿ, ಸುಧೀರ್ ಶೆಟ್ಟಿ, ಸಮಿತಿಯ ಸರ್ವ ಸದಸ್ಯರು, ಭಜನಾ ಮಂಡಳಿ, ಮಹಿಳಾ ಮಂಡಳಿ ಹಾಗೂ ಊರಿನ ಗಣೇಶ ಭಕ್ತರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಸಾಯಂಕಾಲ ಶ್ರೀ ಜನಾರ್ದನ ದೇವರಿಗೆ ವಿಶೇಷ ಹೂವಿನ ಪೂಜೆಯೊಂದಿಗೆ ಕಾರ್ಯಕ್ರಮವು ಶ್ರದ್ಧಾಭಕ್ತಿಗಳಿಂದ ಮುಕ್ತಾಯಗೊಂಡಿತು.