Monday, August 24, 2026
ಸುದ್ದಿ

ಸೈಂಟ್ ಮಿಲಾಗ್ರಿಸ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ‘ಆಸರೆ’ ವೃದ್ಧಾಶ್ರಮಕ್ಕೆ ನಿತ್ಯೋಪಯೋಗಿ ಕಿಟ್ ವಿತರಣೆ – ಕಹಳೆ ನ್ಯೂಸ್

ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಅಭಿವೃದ್ಧಿ ಹಾಗೂ ಸಾಮಾಜಿಕ ಬದ್ಧತೆಯ ಸಾಂಕೇತಿಕವಾಗಿ, ಪಾಂಗಾಳಗುಡ್ಡೆಯ ‘ಆಸರೆ’ ಹಿರಿಯ ನಾಗರಿಕರ ವೃದ್ಧಾಶ್ರಮಕ್ಕೆ ದೈನಂದಿನ ಅಗತ್ಯ ವಸ್ತುಗಳ (ಕಿಟ್) ವಿತರಣಾ ಕಾರ್ಯಕ್ರಮವನ್ನು ಆಯೋಜಿಸಿ ಅರ್ಥಪೂರ್ಣವಾಗಿ ನೆರವೆರಿಸಿದರು

ಜಾಹೀರಾತು

ಕಳೆದ 10 ವರ್ಷಗಳಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸೊಸೈಟಿಯ ವಿವಿಧ ಶಾಖೆಗಳ ಮೂಲಕ ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರಿಗೆ ಅಗತ್ಯ ವಸ್ತುಗಳನ್ನು ವಿತರಿಸುವ ಸೇವಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹಿರಿಯರ ಆಶೀರ್ವಾದಕ್ಕಿಂತ ದೊಡ್ಡ ಸಂಪತ್ತಿಲ್ಲ: ಮನೀಷ್
ಉಡುಪಿ-ಮಂಗಳೂರು ವಿಭಾಗದ ಅಭಿವೃದ್ಧಿ ವ್ಯವಸ್ಥಾಪಕರಾದ ಮನೀಷ್ ಮಾತನಾಡಿ, “ನಮ್ಮ ಪ್ರೀತಿಯ ಹಿರಿಯರಿಗಾಗಿ ಈ ಸಣ್ಣ ಸೇವಾ ಕಾರ್ಯಕ್ರಮವನ್ನು ಆಯೋಜಿಸಿರುವುದು ಹೆಮ್ಮೆಯ ವಿಷಯ. ಹಿರಿಯರ ಆಶೀರ್ವಾದ ಮತ್ತು ಸಂತೋಷಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ. ಇದು ಕೇವಲ ವಸ್ತುಗಳ ವಿತರಣೆಯಲ್ಲ; ‘ನೀವು ನಮ್ಮವರೇ, ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ಪ್ರೀತಿ ಮತ್ತು ಗೌರವದ ಸಂಕೇತವಾಗಿದೆ,” ಎಂದು ಬ್ಯಾಂಕ್‌ನ ಸಾಮಾಜಿಕ ಕಾಳಜಿಯನ್ನು ಸ್ಮರಿಸಿದರು.

**ವೃದ್ಧಾಪ್ಯ ಶಾಪವಲ್ಲ, ಅನುಭವದ ಖಜಾನೆ: ಶಾಸಕ ಸುರೇಶ್ ಶೆಟ್ಟಿ ಗುರ್ಮೆ**
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, “ಹಿರಿಯ ನಾಗರಿಕರು ಯಾರಿಗೂ ಭಾರವಲ್ಲ, ಅವರು ಅನುಭವದ ಖಜಾನೆ. ಅವರ ಜೀವನದ ಅನುಭವ ಈ ಸಮಾಜಕ್ಕೆ ಮಾರ್ಗದರ್ಶನ. ವೃದ್ಧಾಪ್ಯ ಶಾಪವೂ ಅಲ್ಲ, ರೋಗವೂ ಅಲ್ಲ; ಅದು ಪ್ರತಿಯೊಬ್ಬರ ಜೀವನದ ಸಹಜ ಹಂತ. ಹಿರಿಯರನ್ನು ಗೌರವಿಸುವ ಸೈಂಟ್ ಮಿಲಾಗ್ರಿಸ್ ಸಂಸ್ಥೆಯ ಈ ಸೇವೆ ಇತರರಿಗೂ ಮಾದರಿಯಾಗಿದ್ದು, ದೇವರು ಮೆಚ್ಚುವ ಕಾರ್ಯವಾಗಿದೆ. ಸಮಾಜದ ಋಣ ತೀರಿಸುವ ಇಂತಹ ಒಳ್ಳೆಯ ಕಾರ್ಯಗಳ ಜೊತೆಗೆ ನಾನು ಸದಾ ಇರುತ್ತೇನೆ,” ಎಂದು ಅಭಯ ನೀಡಿದರು.
ಕಾರ್ಯಕ್ರಮದಲ್ಲಿ ಪೇಟೆಬೆಟ್ಟು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಅಧ್ಯಕ್ಷರಾದ ಹರಿಶ್ಚಂದ್ರ, ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೊಸೈಟಿಯ ಅಧಿಕಾರಿ ಗೌತಮ್, ‘ಆಸರೆ’ ವೃದ್ಧಾಶ್ರಮದ ಸಂಸ್ಥಾಪಕರಾದ ಫ್ರೆಡ್ವಿನ್ ಸೋನ್ಸ್ (ಪೆನ್ ವೆಲ್ ಸೋನ್ಸ್), ಸೊಸೈಟಿಯ ಕಾವ್ಯಶ್ರೀ ವೇದಿಕೆಯಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದರು.

ಮಾಧ್ಯಮ ಮಿತ್ರರಾದ ಸಂತೋಷ್ ಎಂ. ಶೆಟ್ಟಿಗಾರ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.