ಸರ್ಕಾರಿ ಪ್ರೌಢಶಾಲೆ ಗೋಳ್ತಮಜಲು, ಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ – ಕಹಳೆ ನ್ಯೂಸ್

ಕಲ್ಲಡ್ಕ : ಸರ್ಕಾರಿ ಪ್ರೌಢಶಾಲೆ ಗೋಳ್ತಮಜಲುವಿನಲ್ಲಿ 2025-26ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 100ರಷ್ಟು ಫಲಿತಾಂಶ ತಂದ ವಿದ್ಯಾರ್ಥಿಗಳ ಸಾಧನೆಗಾಗಿ ಅಭಿನಂದನಾ ಕಾರ್ಯಕ್ರಮ ಆಗುಸ್ಟ್ 22 ನೇ ಶನಿವಾರ ಶಾಲಾ ಸಭಾಭವನದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಕಾರ್ಯಾಧ್ಯಕ್ಷರಾದ ಚಂದ್ರಶೇಖರ್ ಟೈಲರ್ ವಹಿಸಿದ್ದರು. ಉತ್ತಮ ಫಲಿತಾಂಶಕ್ಕಾಗಿ ಶಾಲೆಯಲ್ಲಿ ಕೈಗೊಂಡ ಕ್ರಮಗ ಬಗ್ಗೆ ವಿಜ್ಞಾನ ಶಿಕ್ಷಕ ಚಿದಾನಂದ ಕೆ ಮಾಹಿತಿ ನೀಡಿದರು. ಸಾಧನೆಗೈದ ಪ್ರತಿ ವಿದ್ಯಾರ್ಥಿಯನ್ನು ಅವರ ಪೋಷಕರೊಂದಿಗೆ ಗೌರವಿಸಿ ಸನ್ಮಾನಿಸಲಾಯಿತು.. ಈ ಸಂದರ್ಭದಲ್ಲಿ 100 ಶೇಕಡ ಫಲಿತಾಂಶ ಬರಲು ಕಾರಣವಾದ ಶಿಕ್ಷಕರನ್ನು ಎಸ್‌ಡಿಎಂಸಿ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿಗಳ ಪರವಾಗಿ ಕುಮಾರಿ ಜ್ಞಾನವಿ ಹಾಗೂ ಶಾಲೆಗೆ ಪ್ರಥಮ ಸ್ಥಾನ ಪಡೆದ ಇನ್ನಮ್ಮ ಅಫೀಫಾ ಮಾತನಾಡಿ, ಶಾಲೆಯಲ್ಲಿ ದೊರೆತ ಉತ್ತಮ ಕಲಿಕಾ ವಾತಾವರಣ ಮತ್ತು ಶಿಕ್ಷಕರ ಮಾರ್ಗದರ್ಶನವನ್ನು ಕೃತಜ್ಞತೆಯಿಂದ ಸ್ಮರಿಸಿದರು. ವಿದ್ಯಾರ್ಥಿಗಳು ಕಳೆದ ಮೂರು ವರ್ಷಗಳ ಶಾಲಾ ದಿನಗಳ ನೆನಪಿನ ಚಿತ್ರ-ವಿಡಿಯೋ ತುಣುಕುಗಳನ್ನು ಪ್ರದರ್ಶಿಸಲಾಯಿತು.
ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಮೋನಪ್ಪ ದೇವಸ್ಯ ಎಸ್‌ಡಿಎಂಸಿ ಸದಸ್ಯರಾದ ನಾಗೇಶ್ ಪೂಜಾರಿ, ಕೃಷ್ಣಪ್ಪ ಪೂಜಾರಿ, ಬಾಲಕೃಷ್ಣ ಕೊಠಾರಿ, ಗೀತಾ, ಪದ್ಮಾವತಿ, ಗುಲಾಬಿ. ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿ ಗಗನ್ ಕುಮಾರ್ ಪ್ರಾಥಿಸಿ,,ಹಿಂದಿ ಭಾಷಾ ಶಿಕ್ಷಕ ಶಂಕರ್ ವೆಂಕಪ್ಪ ಪಾವಸ್ಕರ್ ಸ್ವಾಗತಿಸಿ,ಶಾಲಾ ಮುಖ್ಯ ಶಿಕ್ಷಕಿ ಸುಜಾತಾ ಪ್ರಾಸ್ತಾವಿಕ ನುಡಿಗಳನ್ನಾಡಿದರು ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ ಟಿ. ವಂದಿಸಿದರು. ಕನ್ನಡ ಭಾಷಾ ಶಿಕ್ಷಕಿ ಸುನೀತಾ ಬಿ. ಕಾರ್ಯಕ್ರಮ ನಿರೂಪಿಸಿದರು.











