Sunday, August 16, 2026
ಸುದ್ದಿ

ಸಾಜ ಶಾಲೆಯಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆ-ಕಹಳೆ ನ್ಯೂಸ್

ಸಮಾಜ ಶಾಲೆಯಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜವನ್ನು ಹಿರಿಯರೂ ಪ್ರಗತಿಪರ ಕೃಷಿಕರೂ ಆಗಿರುವ ನಾರಾಯಣ ರೈ ಸಾಜ ಅರಳಿಸಿದರು.

ಜಾಹೀರಾತು

ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸುಧಾಕರ ನಾಯಕ್ ಹಸಂತಡ್ಕ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಮಾನಾಥ ಬಲ್ಯಾಯ, ಚಂದಪ್ಪ ಪೂಜಾರಿ ಕಾಡ್ಲ, ಇದ್ದಿಕುಂಞಿ ಹಾಜಿ, ಹಿರಿಯ ದೈವ ನರ್ತಕರಾದ ಕುಟ್ಟಿ ನಲಿಕೆ ಕೂಟೇಲು, ನಿ. ಪೂ. ಗ್ರಾ. ಪಂ ಉಪಾಧ್ಯಕ್ಷರಾದ ರವಿಚಂದ್ರ ನಾಯ್ಕ್ ಸಾಜ, ಉದ್ಯಮಿಗಳಾದ ಮುರಳಿ ಕೃಷ್ಣ ಹಸಂತಡ್ಕ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಶಾಲಾ ಮಕ್ಕಳು ಮತ್ತು ಊರಿನವರು ಮೆರವಣಿಗೆಯಲ್ಲಿ ಪಾಲ್ಗೊಂಡರು ಎಲ್ಲರಿಗೂ ಸಿಹಿ ತಿಂಡಿ ವಿತರಿಸಲಾಯಿತು.

ಕೆನರಾ ಬ್ಯಾಂಕ್ ಪ್ರೋತ್ಸಾಹ ಧನ ವಿತರಣೆ ಬಲ್ನಾಡು ಶಾಖೆಯ ಮ್ಯಾನೇಜರ್ ಬಿಪಿನ್ ರಾವತ್ ಇವರು ಕಳೆದ ವರ್ಷದಲ್ಲಿ ಕಲಿಕೆಯಲ್ಲಿ ಸಾಧನೆ ಇರುವ ಪ.ಜಾತಿ ಪ.ಪಂಗಡಗಳ ಹೆಣ್ಣು ಮಕ್ಕಳಾದ ಲಿಖಿತ ಕೆಎಸ್ ಮತ್ತು

ನಿಶ್ಮಿತ ಎಂ ಇವರಿಗೆ ತಲಾ 3,000/- ರೂಪಾಯಿಗಳ ಚೆಕ್ಕನ್ನು ವಿತರಿಸಿದರು

ದತ್ತಿನಿಧಿ ವಿತರಣೆ :- ನಿವೃತ್ತ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ಎನ್ ಹಾಗೂ ಪುರಂದರ ಭಟ್ ಅಟ್ಲಾರು ಇವರ ಪ್ರತಿನಿಧಿಯನ್ನು ಕಳೆದ ವರ್ಷದ 7ನೇ ತರಗತಿಯ ವಿದ್ಯಾರ್ಥಿಗಳಾದ ಕೀರ್ತಿ ಕೆ ಹಾಗೂ ಲಿಖಿತ ಕೆ ಎಸ್ ಇವರಿಗೆ ವಿತರಿಸಲಾಯಿತು.

ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ದೇಶಭಕ್ತಿ ಗೀತೆಗಳ ಕಾರ್ಯಕ್ರಮ ನೋಡುಗರ ಕಣ್ಮನ ಸೆಳೆಯಿತು.