Saturday, August 15, 2026
ಸುದ್ದಿ

ಎನ್.ಎಂ.ಸಿ: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ತಿರಂಗ ಧ್ವಜ ಯಾತ್ರೆ-ಕಹಳೆ ನ್ಯೂಸ್

ಸುಳ್ಯ : ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನೆಹರು ಮೆಮೋರಿಯಲ್ ಕಾಲೇಜು, ಸುಳ್ಯದ ಎನ್‌ಸಿಸಿ ಘಟಕದ ನೇತೃತ್ವದಲ್ಲಿ ಇಂದು ತಿರಂಗಾ ಧ್ವಜ ಯಾತ್ರೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಜಾಹೀರಾತು

ಕೆವಿಜಿ ವೃತ್ತದ ಬಳಿಯಿಂದ ನೆಹರೂ ಮೆಮೋರಿಯಲ್ ಕಾಲೇಜು ಮುಂಭಾಗದವರೆಗೆ ಸಾಗಿಬಂದ ತಿರಂಗಾ ಜಾಥಾದಲ್ಲಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಎನ್‌ಸಿಸಿ ಘಟಕದ ಕೆಡೆಟ್‌ಗಳು, ಎನ್.ಎಸ್.ಎಸ್, ಯೂತ್ ರೆಡ್ ಕ್ರಾಸ್, ರೇಂಜರ್ ಅಂಡ್ ರೋವರ್ ಘಟಕಗಳ ಸದಸ್ಯರು ಹಾಗೂ ಇತರ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ತ್ರಿವರ್ಣ ಧ್ವಜವನ್ನು ಹಿಡಿದು ದೇಶಭಕ್ತಿ ಘೋಷಣೆಗಳೊಂದಿಗೆ ನಡೆದ ಸಂಚಲನವು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ರಾಷ್ಟ್ರೀಯ ಏಕತೆ ಹಾಗೂ ದೇಶದ ಮೇಲಿನ ಜವಾಬ್ದಾರಿಯ ಭಾವನೆಯನ್ನು ಮೂಡಿಸಿತು. ಕಾಲೇಜಿನ ಆಡಳಿತ ಮಂಡಳಿ, ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ತಿರಂಗಾ ಮಾರ್ಚ್ ಅರ್ಥಪೂರ್ಣವಾಗಿ ನಡೆಯಿತು.