Monday, August 10, 2026
ಸುದ್ದಿ

100 ಅಡಿ ಪ್ರಪಾತಕ್ಕೆ ಬಿದ್ದ ಲಾರಿ : ಮುರಿದುಬಿದ್ದ ತಡೆ ಬೇಲಿ, ಮರಗಳು : ಚಾಲಕ, ನಿರ್ವಾಹಕ ಪಾರು- ಕಹಳೆ ನ್ಯೂಸ್

ಚಿಕ್ಕಮಗಳೂರು: 10 ಚಕ್ರದ ಲಾರಿಯೊಂದು 100 ಅಡಿ ಪ್ರಪಾತಕ್ಕೆ ಉರುಳಿ ಬಿದ್ದ ಘಟನೆ ಚಿಕ್ಕಮಗಳೂರು  ನಗರದ ಹೊರವಲಯದ ಕಣಿವೆ ಕ್ರಾಸ್ ಬಳಿ ನಡೆದಿದೆ.

ಜಾಹೀರಾತು
ಕಡೂರು-ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ತೆರಳುತ್ತಿತ್ತು. ಈ ವೇಳೆ ಬ್ರೇಕ್‌ ಫೇಲ್‌ನಿಂದ ಈ ಅಪಘಾತ ಸಂಭವಿಸಿದೆ. ರಸ್ತೆ ಪಕ್ಕದ ತಡೆ ಬೇಲಿ, ಮರಕ್ಕೆ ಡಿಕ್ಕಿಯಾಗಿ ಲಾರಿ ಪ್ರಪಾತಕ್ಕೆ ಬಿದ್ದಿದೆ. ಡಿಕ್ಕಿಯ ರಭಸಕ್ಕೆ ತಡೆ ಬೇಲಿ ಹಾಗೂ ಲಾರಿಗೆ ಅಡ್ಡ ಸಿಕ್ಕ ಗಿಡ ಮರಗಳು ಮುರಿದು ಬಿದ್ದಿವೆ. ಲಾರಿ ಸಂಪೂರ್ಣ ಜಖಂ ಆಗಿದ್ದು. ಪ್ರಪಾತದ ಸಮತಟ್ಟ ಪ್ರದೇಶದಲ್ಲಿ ಹೋಗಿ ನಿಂತಿದೆ.
ಅದೃಷ್ಟವಶಾತ್ ಚಾಲಕ ಹಾಗೂ ನಿರ್ವಾಹಕ ಪ್ರಾಣಪಾಯದಿಂದ ಪಾರಾಗಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು