Wednesday, August 5, 2026
ಸುದ್ದಿ

ಸೇನೆಯಿಂದ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ಸುಂದರ ಪೂಜಾರಿಯವರಿಗೆ ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ವತಿಯಿಂದ ಸ್ವಾಗತ – ಕಹಳೆ ನ್ಯೂಸ್

ಬಡಗನ್ನೂರುಃ ಭಾರತೀಯ ಗಡಿ ಭದ್ರತಾ ದಳದಲ್ಲಿ ಸುದೀರ್ಘ 34 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಅ. 3 ರಂದು ಹುಟ್ಟೂರಿಗೆ ಆಗಮಿಸಿರುವ ಸುಂದರ ಪೂಜಾರಿ ಪಳಂಬೆ        (ನಿಡ್ಪಳ್ಳಿ) ಅವರನ್ನು ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ವತಿಯಿಂದ ಸ್ವಾಗತಿಸಲಾಯಿತು.

ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ಶ್ರೀ ವಿಘ್ನೇಶ್ ಹಿರಣ್ಯ ರವರು ಯೋಧ ಸುಂದರ ಪೂಜಾರಿಯವರಿಗೆ ಶಾಲು ಹೊದಿಸಿ ಹಾರ ಹಾಕಿ ಅಭಿನಂದಿಸಿದರು. ಈ ಸಂಧರ್ಭದಲ್ಲಿ ಶಿಕ್ಷಕರಾದ ವಿಶ್ವನಾಥ ಗೌಡ ಬೊಳ್ಳಾಡಿ, ಪ್ರೀತಿ ಕುಮಾರಿ ಎಂ ಪಿ, ಜಯಾಶ್ರೀ ಹೆಚ್, ಭವಿತಾ ಪಿ, ಶ್ರೀ ಕೃಷ್ಣ ಹಿ. ಪ್ರಾ. ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ್ ಎನ್, ನಿವೃತ್ತ ದೖೆಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಮೋನಪ್ಪ ಎಂ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು