Wednesday, August 5, 2026
ಸುದ್ದಿ

ಕೆಂಪು ಸಮುದ್ರದಲ್ಲಿ ಫಸ್ಟ್‌ ಟೈಮ್‌ ಭಾರತೀಯ ಹಡಗಿನ ಮೇಲೆ ದಾಳಿ : ಎಲ್ಲಾ 14 ಸಿಬ್ಬಂದಿ ರಕ್ಷಣೆ, ಭಾರತ ಖಂಡನೆ – ಕಹಳೆ ನ್ಯೂಸ್

ನವದೆಹಲಿ: ಯೆಮನ್‌ನ ಪಶ್ಚಿಮ ಕರಾವಳಿ ಸಮೀಪದ ಕೆಂಪು ಸಮುದ್ರದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಹಡಗಿನ ಮೇಲೆ ದಾಳಿಯಾಗಿದೆ. ಸ್ಫೋಟಕಗಳಿಂದ ತುಂಬಿದ ದೋಣಿಯೊಂದು ಭಾರತೀಯ ಹಡಗಿಗೆ ಡಿಕ್ಕಿ ಹೊಡೆದ ಪರಿಣಾಮ ಹಡಗು ಮುಳುಗಿರುವ ಘಟನೆ ನಡೆದಿದೆ.

ಈ ದಾಳಿಯಲ್ಲಿ ಹಡಗಿನಲ್ಲಿದ್ದ 13 ಭಾರತೀಯರು ಸೇರಿದಂತೆ ಒಟ್ಟು 14 ಸಿಬ್ಬಂದಿಯನ್ನ ಯೆಮನ್ ನೌಕಾಪಡೆ ಹಾಗೂ ಕರಾವಳಿ ರಕ್ಷಣಾ ಪಡೆ ಜಂಟಿ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಿದೆ. ಈ ದಾಳಿಯ ಹೊಣೆಯನ್ನ ಇದುವರೆಗೆ ಯಾವುದೇ ಸಂಘಟನೆ ಹೊತ್ತಿಲ್ಲ. ಕೆಂಪು ಸಮುದ್ರದಲ್ಲಿ ಭಾರತೀಯ ಹಡಗಿನ ಮೇಲೆ ನಡೆದ ಮೊದಲ ದಾಳಿ ಇದಾಗಿದೆ ಎಂದು ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತದಿಂದ ತೀವ್ರ ಖಂಡನೆ
ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್ ಈ ಬಗ್ಗೆ ಪ್ರತಿಕ್ರಿಯಿಸಿ, ಭಾರತೀಯ ಹಡಗಿನ ಮೇಲಿನ ದಾಳಿಯನ್ನ ಅಪ್ರಚೋದಿತ ಮತ್ತು ಅಮಾನವೀಯ ದಾಳಿ ಎಂದು ಕರೆದಿದ್ದರೆ.

ಭಾರತೀಯ ಮೆಕನೈಸ್ಡ್ ಸೇಲಿಂಗ್ ವೆಸೆಲ್ (MSV) ‘ಫೈಜ್ ನೂರ್ ಓಲಿಯಾ’ ಯೆಮನ್ ಸಮುದ್ರ ಪ್ರದೇಶದ ಬಳಿ ಪ್ರಕ್ಷೇಪಕದ ದಾಳಿಗೆ ಒಳಗಾಗಿ, ಹಡಗು ಮಗುಚಿ ಮುಳುಗಿದೆ. ಶಸ್ತ್ರಾಸ್ತ್ರವಿಲ್ಲದ ಈ ಹಡಗಿನ ಮೇಲಿನ ದಾಳಿಯನ್ನ ಭಾರತ ತೀವ್ರವಾಗಿ ಖಂಡಿಸುತ್ತದೆ ಎಂದು ಎಕ್ಸ್‌ ಪೋಸ್ಟ್‌ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭಾರತೀಯರ ಸುರಕ್ಷತೆ ಸರ್ಕಾರದ ಮೊದಲ ಆದ್ಯತೆ
13 ಭಾರತೀಯರು ಸೇರಿದಂತೆ ಒಟ್ಟು 14 ಸಿಬ್ಬಂದಿಯನ್ನ ಯೆಮನ್ ಕರಾವಳಿ ರಕ್ಷಣಾ ಪಡೆ ಸುರಕ್ಷಿತವಾಗಿ ರಕ್ಷಿಸಿ ಮೊಖಾ ಬಂದರಿಗೆ ಕರೆತಂದಿರುವುದು ಸಮಾಧಾನದ ಸಂಗತಿ ಎಂದು ಸೋನೋವಾಲ್ ತಿಳಿಸಿದ್ದಾರೆ.

ಈ ಘಟನೆಯ ಹಿನ್ನೆಲೆಯಲ್ಲಿ ಪ್ರದೇಶದಲ್ಲಿರುವ ಭಾರತೀಯ ನಾವಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹಾಗೂ ರಕ್ಷಿಸಲ್ಪಟ್ಟ ಸಿಬ್ಬಂದಿಗೆ ಅಗತ್ಯ ನೆರವು ಒದಗಿಸಲು ಎಲ್ಲಾ ಸಂಬಂಧಿತ ಇಲಾಖೆಗಳೊಂದಿಗೆ ತಕ್ಷಣ ಸಮನ್ವಯ ಸಾಧಿಸುವಂತೆ ಮಹಾನಿರ್ದೇಶಕ (DGMA) ಅವರಿಗೆ ಸೂಚನೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವು ನೀಡಿದ ಯೆಮನ್ ಅಧಿಕಾರಿಗಳಿಗೆ ಭಾರತ ವಿದೇಶಾಂಗ ಸಚಿವಾಲಯ ಕೃತಜ್ಞತೆ ಸಲ್ಲಿಸಿದೆ.