
ಸಿನಿಮಾ ನಟನೆಯಿಂದ ದೂರವಿದ್ದರೂ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ನಟಿ ರಾಧಿಕಾ ಪಂಡಿತ್ ಯಶ್ ಅವರ ಪತ್ನಿ ಎಂಬ ಗುರುತಿನಾಚೆಯೂ ಸ್ಯಾಂಡಲ್‌ವುಡ್‌ನಲ್ಲಿ ಅಪಾರ ಅಭಿಮಾನಿಗಳನ್ನ ಹೊಂದಿದ್ದಾರೆ. ಇದೀಗ ‘ರಾಮಾಯಣ’ ಚಿತ್ರದ ಟ್ರೈಲರ್ ಬಿಡುಗಡೆಯಾದ ಬೆನ್ನಲ್ಲೇ ರಾಧಿಕಾ ಪಂಡಿತ್ ಹಂಚಿಕೊಂಡಿರುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿದೆ.
ಹತ್ತು ತಲೆ ರಾವಣನ (Ravana) ಬೃಹತ್ ಪ್ರತಿಕೃತಿಯ ಮುಂದೆ ನಿಂತು ಫೋಟೋಗೆ ಪೋಸ್ ನೀಡಿರುವ ರಾಧಿಕಾ ಪಂಡಿತ್, ಆ ಚಿತ್ರವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
‘ರಾಮಾಯಣ’ ಚಿತ್ರದಲ್ಲಿ ಯಶ್ ರಾವಣನ ಪಾತ್ರದ ಮೂಲಕ ಅಬ್ಬರಿಸಿದ್ದು, ಅವರ ಲುಕ್ ಮತ್ತು ಅಭಿನಯದ ಝಲಕ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಇದೇ ಹಿನ್ನೆಲೆಯಲ್ಲಿ ರಾಧಿಕಾ ಹಂಚಿಕೊಂಡಿರುವ ಈ ಫೋಟೋ ಅಭಿಮಾನಿಗಳ ಗಮನ ಸೆಳೆದಿದ್ದು, ಪತಿಗೆ ತಮಾಷೆಯಾಗಿ ಟಕ್ಕರ್ ನೀಡಿದಂತಿದೆ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.
ಫೋಟೋಗೆ “If You Know, You Know” ಎಂಬ ಕ್ಯಾಪ್ಷನ್ ನೀಡಿರುವ ರಾಧಿಕಾ ಅವರ ಪೋಸ್ಟ್‌ಗೆ ನೆಟ್ಟಿಗರಿಂದ ವಿಭಿನ್ನ ರೀತಿಯ ಕಾಮೆಂಟ್‌ಗಳು ಹರಿದುಬರುತ್ತಿವೆ.











