ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ಐ.ಸಿ.ಯು ನಲ್ಲಿ ಚಿಕಿತ್ಸೆ ಪಡೆಯುತ್ತಿರುವ 49 ದಿನಗಳ ಪುಟ್ಟ ಕಂದಮ್ಮನ ಚಿಕಿತ್ಸೆಗಾಗಿ ನೆರವಿನ ಮನವಿ – ಕಹಳೆ ನ್ಯೂಸ್

ಪುತ್ತೂರು : ನರಿಮೊಗರು ಗ್ರಾಮದ ಮುಕ್ವೆ ನಿವಾಸಿಗಳಾದ ಜಗದೀಶ ಎಲಿಕ ಮತ್ತು ಶ್ರೀಮತಿ ವಿನುತಾ ಅವರ 49 ದಿನಗಳ ವಯಸ್ಸಿನ ಈ ಮಗುವು ಇನ್‌ಬಾರ್ನ್ ಎರರ್ ಆಫ್ ಮೆಟಬಾಲಿಸಮ್ (Inborn Error of Metabolism – ಹೈಪರ್‌ಅಮೋನೇಮಿಯಾ ಜೊತೆಗೆ ತೀವ್ರ ಮೆಟಬಾಲಿಕ್ ಆಸಿಡೋಸಿಸ್) ಮತ್ತು ಬಲಬದಿಯ ಡಯಾಫ್ರಮ್ ಎವೆಂಟ್ರೇಶನ್ (eventration of diaphragm)ಎಂಬ ಸಮಸ್ಯೆಯಿಂದ ಬಳಲುತಿದೆ ಎಂದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಮಗುವಿಗೆ ಅತ್ಯಂತ ವಿಶೇಷವಾದ ಚಿಕಿತ್ಸೆ, ನಿಯಂತ್ರಿತ ಆಹಾರ ನೀಡಿಕೆ (Titrated feed) ಹಾಗೂ ವಿವರವಾದ ಜೆನೆಟಿಕ್ ವಿಶ್ಲೇಷಣೆಯ (Genetic analysis)ಅಗತ್ಯವಿದೆ.
ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ಐ.ಸಿ.ಯು ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು ಈಗಾಗಲೇ ರೂ 2 ಲಕ್ಷ ಖರ್ಚಾಗಿರುತ್ತದೆ. ಇನ್ನೂ ಐ.ಸಿ.ಯು ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗುವಿನ ಮುಂದಿನ ಚಿಕಿತ್ಸೆಗಾಗಿ ಸುಮಾರು 8 ರಿಂದ 10 ಲಕ್ಷ ರೂಪಾಯಿಗಳ ವೆಚ್ಚವಾಗುವ ನಿರೀಕ್ಷೆಯಿದೆ ಎಂದು ವೈದ್ಯರು ತಿಳಿಸಿರುತ್ತಾರೆ. ಈ ವೆಚ್ಚವನ್ನು ಭರಿಸಲು ಆರ್ಥಿಕವಾಗಿ ಅಸಮರ್ಥರಾಗಿರುವ ಮಗುವಿನ ಪೋಷಕರಿಗೆ ಇದು ಅತ್ಯಂತ ಕಷ್ಟಕರವಾಗಿದೆ. ಈ ಮಗುವಿಗೆ ಆರ್ಥಿಕ ಸಹಾಯವನ್ನು ನೀಡಬೇಕಾಗಿ ಈ ಮೂಲಕ ವಿನಂತಿಸಲಾಗಿದೆ.











