Wednesday, July 22, 2026
ಸುದ್ದಿ

30ಕ್ಕೂ ಹೆಚ್ಚು ದೇಶಗಳಲ್ಲಿ ʻಜನನಾಯಗನ್‌ʼ ಗ್ರ್ಯಾಂಡ್‌ ರಿಲೀಸ್‌ಗೆ ಸಜ್ಜು : 2 ದಿನ ಇರುವಾಗ್ಲೇ ಬಿಗ್‌ ಚೇಂಜಸ್‌ – ಕಹಳೆ ನ್ಯೂಸ್

ಕಾಲಿವುಡ್‌ ಸ್ಟಾರ್‌ ನಟ, ಸಿಎಂ ವಿಜಯ್‌  ಅಭಿನಯದ ಕೊನೆಯ ಸಿನಿಮಾ ʻಜನ ನಾಯಗನ್‌ʼ (Jana Nayagan) ತೆರೆ ಕಾಣಲು ಇನ್ನೆರಡು ದಿನಗಳಷ್ಟೇ ಬಾಕಿಯಿದೆ. ಬಹುನಿರೀಕ್ಷಿತ ಸಿನೆಮಾ ಇದೇ ಜುಲೈ 23ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಾಣುತ್ತಿದ್ದು ವಿಜಯ್ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.

ಇದು ವಿಜಯ್‌ ಅವರ ಕೊನೆಯ ಸಿನಿಮಾ ಆಗಿರೋದ್ರಿಂದ ಭಾರೀ ಕುತೂಹಲ ಮೂಡಿಸಿದೆ. ಸೆನ್ಸಾರ್‌ ಗುದ್ದಾಟದಿಂದ 7 ತಿಂಗಳು ವಿಳಂಬ ಅನುಭವಿಸಿದ್ರೂ ಆ ಸಮಯವನ್ನ ಮತ್ತಷ್ಟು ಸದುಪಯೋಗ ಪಡಿಸಿಕೊಂಡ ಸಿನಿ ತಂಡ ಹಲವು ಮಾರ್ಪಾಡುಗಳನ್ನ ಮಾಡಿದೆ. ಸಿನಿಮಾಗೆ ಇನ್ನೆರಡು ದಿನಗಳು ಇರುವಾಗ ಪ್ರಮುಖ ಬದಲಾವಣೆಗಳ ಬಗ್ಗೆ ಸಿನಿ ತಂಡ ಹೇಳಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸಿಎಂ ಗೌರವಿಸುವ ಸ್ಪೆಷಲ್‌ ಟೈಟಲ್‌ ಕಾರ್ಡ್‌
ಮೂಲಗಳ ಪ್ರಕಾರ, ವಿಜಯ್ ಅವರ ಪ್ರಸಿದ್ಧ ಸಿಗ್ನೇಚರ್ ಹ್ಯಾಂಡ್ ಫ್ಲಿಕ್ ಶೈಲಿಯನ್ನು ಚಿತ್ರದಲ್ಲಿ ಸೇರಿಸಲಾಗಿದ್ದು, ಅವರ ಮುಖ್ಯಮಂತ್ರಿಯ ಸ್ಥಾನವನ್ನು ಗೌರವಿಸುವ ವಿಶೇಷ ಟೈಟಲ್ ಕಾರ್ಡ್‌ನ್ನೂ ಸೇರಿಸಲಾಗಿದೆ. ಜೊತೆಗೆ ಕೆಲವು ಹೊಸ ದೃಶ್ಯಗಳನ್ನ ಚಿತ್ರೀಕರಿಸಿ ಅಂತಿಮ ಆವೃತ್ತಿಯಲ್ಲಿ ಅಳವಡಿಸಲಾಗಿದೆ. ಚಿತ್ರದ ಆರಂಭಿಕ ಟೈಟಲ್ ಕಾರ್ಡ್‌ನಲ್ಲಿ ವಿಜಯ್ ಅವರನ್ನ ಕೇವಲ ನಟನಾಗಿ ಅಲ್ಲ, ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪರಿಚಯಿಸಲಾಗಿದೆ. ಜೊತೆಗೆ ಅವರ ರಾಜಕೀಯ ಪಕ್ಷ ಟಿವಿಕೆ (TVK) ಕುರಿತು ನೇರ ಉಲ್ಲೇಖವನ್ನೂ ಸೇರಿಸಲಾಗಿದೆ.

ಚಾರ ಗೀತೆಯಲ್ಲಿ ವಿಜಯ್ ರಿಯಲ್‌ ಸ್ಟೈಲ್‌
ಚಿತ್ರದ ಪ್ರಚಾರ ಗೀತೆ ‘ರಾವಣ ಮಾವಂಡಾ’ ಯಲ್ಲಿ ವಿಜಯ್ ಅವರ ವಿಶಿಷ್ಟ ಹಾವಭಾವಗಳನ್ನ ನೆನಪಿಸುವಂತೆ ಮಾರ್ಪಾಡುಗಳನ್ನ ಮಾಡಲಾಗಿದೆ. ತಮಿಳುನಾಡು ವಿಧಾನಸಭೆಯಲ್ಲಿ ಅವರು ಪ್ರದರ್ಶಿಸಿದ ನೈಜ ಶೈಲಿಯನ್ನ ನೆನಪಿಸುವಂತಹ ದೃಶ್ಯಗಳನ್ನ ಅಳವಡಿಸಲಾಗಿದೆ. ಅನಿರುದ್ಧ್ ರವಿಚಂದರ್ ಸಂಗೀತ ನೀಡಿರುವ ಈ ಹಾಡಿಗೆ ವಿವೇಕ್ ಸಾಹಿತ್ಯ ಬರೆದಿದ್ದಾರೆ. ಸುಮಾರು 2 ನಿಮಿಷಗಳ ಈ ಹೈ-ಎನರ್ಜಿ ಹಾಡಿನಲ್ಲಿ ವಿಜಯ್ ಅವರ ಕೊನೆಯ ಚಿತ್ರದ ಭರ್ಜರಿ ದೃಶ್ಯಗಳು ಕಾಣಿಸಿಕೊಳ್ಳಲಿವೆ.

20 ಸೆಕೆಂಡುಗಳ ದೃಶ್ಯ ಕಟ್‌
ಸೆನ್ಸಾರ್‌ ಮಂಡಳಿ ಚಿತ್ರದಲ್ಲಿನ ಸುಮಾರು 20 ಸೆಕೆಂಡುಗಳ ದೃಶ್ಯಕ್ಕೆ ಕತ್ತರಿ ಹಾಕಲು ಹಾಗೂ 10 ಸೆಕೆಂಡುಗಳ ದೃಶ್ಯವನ್ನು ತಿದ್ದುಪಡಿ ಮಾಡಲು ಸೂಚಿಸಿತ್ತು. ಧಾರ್ಮಿಕ ಉಲ್ಲೇಖಗಳಿರುವ ಕೆಲ ಸಂಭಾಷಣೆಗಳನ್ನ ಮ್ಯೂಟ್‌ ಮಾಡಲು ನಿರ್ದೇಶಿಸಲಾಗಿತ್ತು. ಅದರಂತೆಯೇ ಬದಲಾವಣೆ ಮಾಡಲಾಗಿದೆ.

ವರದಿಗಳ ಪ್ರಕಾರ. ತಮಿಳುನಾಡಿನಲ್ಲಿ ಈಗಾಗಲೇ 3,500ಕ್ಕೂ ಹೆಚ್ಚು ಪ್ರದರ್ಶನಗಳಿಗೆ ಪ್ಲ್ಯಾನ್‌ ಆಗಿದ್ದು, ಈ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ. ಚಿತ್ರದ ಒಟ್ಟು ಅವಧಿ 3 ಗಂಟೆ 3 ನಿಮಿಷಗಳಷ್ಟಿದೆ ಎಂದು ಹೇಳಲಾಗಿದೆ. ಚಿತ್ರ ನಿರ್ಮಾಣ ಸಂಸ್ಥೆಯ ಪ್ರಕಾರ, 30ಕ್ಕೂ ಹೆಚ್ಚು ದೇಶಗಳು ಹಾಗೂ ಭಾರತದ ವಿವಿಧ ರಾಜ್ಯಗಳಲ್ಲಿ ಸುಮಾರು 8,000 ಪರದೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.