Wednesday, July 22, 2026
ಸುದ್ದಿ

ದ್ವಾರಕಾ ರಿಫ್ರೆಶ್ ಮೆಂಟ್ಸ್ ಮತ್ತು ಸಂತೃಪ್ತಿ ವೆಜ್, ಪುತ್ತೂರು ಇವರ ಸಹಯೋಗದಲ್ಲಿ ಜು.24ರಿಂದ ಕೆಮ್ಮಾರದಲ್ಲಿ ದೋಸೆ ಮೇಳ-ಕಹಳೆ ನ್ಯೂಸ್

ದ್ವಾರಕಾ ರಿಫ್ರೆಶ್ ಮೆಂಟ್ಸ್ ಮತ್ತು ಸಂತೃಪ್ತಿ ವೆಜ್, ಪುತ್ತೂರು ಇವರ ಸಹಯೋಗದಲ್ಲಿ ಜುಲೈ 24, 25, 26ರಂದು ಸಂಜೆ ಗಂಟೆ 4ರಿಂದ 10ರವರೆಗೆ ಕೆಮ್ಮಾರದ ಉಜ್ಜೀವನ ಬಡಾವಣೆಯಲ್ಲಿ ‘ದೋಸೆ ಮೇಳ’ ಅದ್ದೂರಿಯಾಗಿ ಜರಗಲಿದೆ.

ಜುಲೈ 24ರಂದು ಸಂಜೆ 4.30ಕ್ಕೆ ದೋಸೆ ಮೇಳದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಭೆಯ ಅಧ್ಯಕ್ಷತೆಯನ್ನು ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಗೋಪಾಲಕೃಷ್ಣ ಭಟ್ಟ ಅರ್ತ್ಯಡ್ಕ ವಹಿಸಲಿದ್ದಾರೆ. ದೋಸೆ ಮೇಳವನ್ನು ‘ಬಳ್ಳಿ’ ಆಯುರ್ ಗ್ರಾಮದ ನಿರ್ಮಾತೃ, ವೈದ್ಯ ಡಾ. ಸುಪ್ರೀತ್ ಲೋಬೋ ಇವರು ನಡೆಸಿಕೊಡಲಿದ್ದಾರೆ. ಸಭೆಯಲ್ಲಿ ಪ್ರಮುಖ ಅಭ್ಯಾಗತರಾಗಿ ಸಂತೃಪ್ತಿ ವೆಜ್ ನ ಮಾಲಕರಾಗಿರುವ ಶ್ರೀ ಗಿರೀಶ್ ಮಲ್ಲ, ಸಾವಯವ ತಜ್ಞರಾದ ಶ್ರೀ ಸುಹಾಸ್ ಮರಿಕೆ, ಪಾಕಪ್ರವೀಣರಾದ ಶ್ರೀ ರವಿ ಕುಂಟಿನಿ, ದ್ವಾರಕಾ ಸಮೂಹ ಸಂಸ್ಥೆಗಳ ಸಹಾಯಕ ನಿರ್ದೇಶಕಿ ಶ್ರೀಮತಿ ಅಶ್ವಿನಿ ಎನ್., ದ್ವಾರಕಾ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಶ್ರೀ ಅಮೃತಕೃಷ್ಣ ಎನ್. ಉಪಸ್ಥಿತರಿರಲಿದ್ದಾರೆ. ಆ ದಿನ ಸಂಜೆ 6.30ರಿಂದ ಶ್ರೀ ವೆಂಕಟಕೃಷ್ಣ ಭಟ್ಟ ಗುಂಡ್ಯಡ್ಕ ಮತ್ತು ಬಳಗದವರಿಂದ ‘ಭಕ್ತಿ ಭಾವ ಗಾನ ಲಹರಿ’ ಕಾರ್ಯಕ್ರಮ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜುಲೈ 25ರಂದು ಸಂಜೆ 4.30ರಿಂದ ಶ್ರೀ ಯಜ್ಞೇಶ ಆಚಾರ್ ಮತ್ತು ಬಳಗವರಿಂದ ‘ಭಕ್ತಿ ಭಾವ ಗಾನ ಲಹರಿ’ ಕಾರ್ಯಕ್ರಮ ನಡೆಯಲಿದೆ.

ಅದೇ ದಿನ ಸಂಜೆ 6ರಿಂದ 9ರವರೆಗೆ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ವಿದುರಾತಿಥ್ಯ’ ಎಂಬ ತಾಳಮದ್ದಳೆ ಸಂಪನ್ನಗೊಳ್ಳಲಿದೆ.

ಮರುದಿನ ಜುಲೈ 26ರಂದು ಸಂಜೆ 4.30ರಿಂದ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮ ಅಧ್ಯಕ್ಷತೆಯನ್ನು ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಗೋಪಾಲಕೃಷ್ಣ ಭಟ್ಟ ಅರ್ತ್ಯಡ್ಕ ಅವರು ವಹಿಸಲಿದ್ದಾರೆ. ವಿವೇಕಾನಂದ ಮಹಾವಿದ್ಯಾಲಯದ ಅಧ್ಯಕ್ಷರಾಗಿರುವ ಡಾ. ಶ್ರೀಪತಿ ಕಲ್ಲೂರಾಯರು ಸಮಾರೋಪ ಭಾಷಣವನ್ನು ಮಾಡಲಿದ್ದಾರೆ. ಪ್ರಮುಖ ಅಭ್ಯಾಗತರಾಗಿ ಉದ್ಯಮಿಗಳಾದ ಶ್ರೀ ಕೃಷ್ಣಮೋಹನ, ದ್ವಾರಕಾ ಪ್ರತಿಷ್ಠಾನದ ನಿರ್ದೇಶಕಿ ಶ್ರೀಮತಿ ಅಮೃತಾ ಶಾನುಭಾಗ್ ಉಪಸ್ಥಿತರಿರಲಿದ್ದಾರೆ.

ಸಂಜೆ 6ರಿಂದ 9ರವರೆಗೆ ವಿದ್ವಾನ್ ಕಲಾದೀಪ ದೀಪಕ್ ಕುಮಾರ್ ಮತ್ತು ಬಳಗದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

ದೋಸೆ ಮೇಳದಲ್ಲಿ ಹಲಸಿನ ಹಣ್ಣು ದೋಸೆ, ಮಾವಿನಹಣ್ಣು ದೋಸೆ, ಸ್ಪ್ರಿಂಗ್ ದೋಸೆ, ಅವಲಕ್ಕಿ ದೋಸೆ, ಮೆಂತೆ ದೋಸೆ, ಪಾಲಕ್ ದೋಸೆ, ಪನೀರ್ ಮಸಾಲದೋಸೆ ಸೇರಿದಂತೆ 50ಕ್ಕೂ ಮಿಕ್ಕಿ ದೋಸೆಗಳ ರಸದೌತಣವಿರಲಿದೆ.