Wednesday, July 15, 2026
ಜಿಲ್ಲೆಪ್ರಾದೇಶಿಕಸುದ್ದಿ

ತೀರ್ಥಹಳ್ಳಿಯಲ್ಲಿ ಸಾವಯವ ಕೃಷಿ ಹಾಗೂ ಪಾರಂಪರಿಕ ಭತ್ತದ ಸಂರಕ್ಷಣೆಗೆ ಸೋದೆ ಶ್ರೀಗಳ ಪಾದಯಾತ್ರೆ -ಕಹಳೆ ನ್ಯೂಸ್

ತೀರ್ಥಹಳ್ಳಿ ತಾಲೂಕಿನ ಅರಳಸುರುಳಿ ಗ್ರಾಮದಲ್ಲಿ ಸಾವಯವ ಕೃಷಿಗೆ ಉತ್ತೇಜನ ನೀಡುವ ಹಾಗೂ ನಮ್ಮ ದೇಶದ ಅಮೂಲ್ಯ ಪಾರಂಪರಿಕ ಭತ್ತದ ವಿವಿಧ ತಳಿಗಳ ಸಂರಕ್ಷಣೆಯ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ, ಸೋದೆ ವಾದಿರಾಜ ಮಠದ ಪರಮಪೂಜ್ಯ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಪಾದಯಾತ್ರೆ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗ್ರಾಮದ ರೈತರು, ಯುವಕರು ಹಾಗೂ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸಿ, ರಾಸಾಯನಿಕ ಮುಕ್ತ ಕೃಷಿಯನ್ನು ಅಳವಡಿಸಿಕೊಳ್ಳುವ ಸಂಕಲ್ಪ ವ್ಯಕ್ತಪಡಿಸಿದರು. ಪಾರಂಪರಿಕ ಭತ್ತದ ತಳಿಗಳು ನಮ್ಮ ಆಹಾರ ಭದ್ರತೆ, ಜೀವವೈವಿಧ್ಯ ಹಾಗೂ ಸಾಂಸ್ಕೃತಿಕ ಪರಂಪರೆಯ ಅಮೂಲ್ಯ ಸಂಪತ್ತಾಗಿದ್ದು, ಅವುಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬ ರೈತನ ಜವಾಬ್ದಾರಿಯಾಗಿದೆ ಎಂದು ಶ್ರೀಗಳು ತಮ್ಮ ಸಂದೇಶದಲ್ಲಿ ತಿಳಿಸಿದರು.

*ಹಾದಿಗಲ್ಲು ಅಭಯ ಲಕ್ಷ್ಮೀ ನರಸಿಂಹ ದೇವಸ್ಥಾನ ಹಾಗೂ ಕೃಷಿ ಪ್ರಯೋಗ ಪರಿವಾರ ತೀರ್ಥಹಳ್ಳಿ ಇವರ ಸಂಯೋಜನೆಯಲ್ಲಿ ನಡೆದ ಎರಡನೇ ಪಾದಯಾತ್ರೆ ಇದಾಗಿದ್ದು , ಮುಂದೆ ಬೇರೆ ಬೇರೆ ಹಳ್ಳಿಗಳಿಗೂ ಪಾದಯಾತ್ರೆ ನಡೆಸಿ ಸಾವಯವ ಕೃಷಿಯ ಬಗ್ಗೆ ಜನಜಾಗೃತಿ ಮೂಡಿಸಲಿದ್ದಾರೆ.* ಹಾದಿಗಲ್ಲು ಲಕ್ಷ್ಮೀನಾರಾಯಣ , ದಿನೇಶ ಸರು , ಶ್ರೀವತ್ಸ , ಅರುಣ ಹಾಗೂ ತೀರ್ಥಹಳ್ಳಿ ತಾಲೂಕಿನ ಅನೇಕ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.